February 24, 2026

Newsnap Kannada

The World at your finger tips!

vijayapura r

ವಿಜಯಪುರ, ಬಂಗಾರಪೇಟೆ ಪತ್ರಕರ್ತರಿಬ್ಬರು ಕೋವಿಡ್ ಗೆ ಬಲಿ

Spread the love

ವಿಜಯಪುರ ನಗರ ಹಾಗೂ ಬಂಗಾರಪೇಟೆ ತಾಲೂಕಿನ ಪತ್ರಕರ್ತರಿಬ್ಬರು‌ ಗುರುವಾರ ಕೋವಿಡ್ ಗೆ ಬಲಿಯಾಗಿದ್ದಾರೆ.

ಯುವ ಪತ್ರಕರ್ತ ಜಾಫರ್ ಕಲಾದಗಿ ಹಾಗೂ ಬಂಗಾರಪೇಟೆ ತಾಲೂಕಿನ ಎ ಎಂ ವೆಂಕಟೇಶ ‌ ಅಕಾಲಿಕ ನಿಧನರಾದರು.

venktesh r

ವಿಜಯಪುರದ ಪತ್ರಕರ್ತ ಜಾಫರ್ ಕಲಾದಗಿ (42) ಕೋವಿಡ್ ಗೆ ಬಲಿಯಾಗಿದ್ದಾರೆ.

ಬಿಜಾಪುರ ಮಿರರ್ ಇಂಗ್ಲೀಷ್ ದಿನ ಪತ್ರಿಕೆ ನಡೆಸುತ್ತಿದ್ದ ಜಾಫರ್ ಕಲಾದಗಿ ಕೋವಿಡ್ ಗೆ ತುತ್ತಾಗಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ತೀವ್ರ ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದರು.

ಸಂತಾಪ:
ಪತ್ರಕರ್ತ ಜಾಫರ್ ಹಾಗೂ ಬಂಗಾರಪೇಟೆ ತಾಲೂಕು ಪತ್ರಕರ್ತ ಎ. ಎಂ ವೆಂಕಟೇಶ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜಾಫರ್ ಹಾಗೂ ವೆಂಕಟೇಶ್ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.‌

error: Content is protected !!