February 24, 2026

Newsnap Kannada

The World at your finger tips!

mk wali

ಸೀತಾರಾಂ ಯಚೂರಿ ಪುತ್ರ ಸೇರಿ ಹಿರಿಯ ಕಾಂಗ್ರೆಸ್ಸಿಗ ಡಾ. ವಾಲಿಯಾ ಕೊರೋನಾ ಗೆ ಬಲಿ

Spread the love

ಸಿಪಿಎಂ ನಾಯಕ ಸೀತಾರಾಂ ಯಚೂರಿ ಪುತ್ರ, 34 ವರ್ಷದ ಯುವಕ ಕೊರೋನಾ ಮಾಹಾ ಮಾರಿಗೆ ಗುರುವಾರ ಬೆಳಿಗ್ಗೆ ಬಲಿಯಾದರು.

ಆಶಿಶ್ ಯಚೂರಿ ( 34) ಎಂಬುವವರು ಗುರು ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ದೆಹಲಿಯಲ್ಲಿ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮಗನ ಸಾವಿನ ಸುದ್ದಿಯನ್ನು ಸೀತಾರಾಂ ಯಚೂರಿಯವರೇ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ಹಿರಿಯ ಕಾಂಗ್ರೆಸ್ಸಿಗ ,ಮಾಜಿ ಸಚಿವ ಬಲಿ

ಹಿರಿಯ ಕಾಂಗ್ರೆಸ್ಸಿಗ, ಮಾಜಿ ಸಚಿವ ಡಾ. ಎ. ಕೆ . ವಾಲಿಯಾ ದೆಹಲಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊರೋನಾ ಗೆ ಇಂದು ಬೆಳಿಗ್ಗೆ ಬಲಿಯಾದರು.

error: Content is protected !!