ಕೊರೊನಾ ಸೋಂಕು ಏರುತ್ತಿರುವ ಹಿನ್ನೆಲೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶ ಇಂದು ಕೊರೋನಾ ಮತ್ತೊಂದು ಹೋರಾಟ ನಡೆಸುತ್ತಿದೆ. ಕೊನೆಯ ಅಸ್ತ್ರವಾಗಿ ಲಾಕ್ ಡೌನ್ ಪ್ರಯೋಗ ಜಾರಿ ಮಾಡೋಣ. ಅಲ್ಲಿಯವರೆಗೆ ಜನರೇ ಸ್ವಯಂ ಪ್ರೇರಣೆಯಿಂದ ಕೊರೋನಾ ವಿರುದ್ದ ಹೋರಾಡೋಣ ಎಂದು ಕರೆ ನೀಡಿದರು.
ಮೋದಿ ಭಾಷಣದ ಮುಖ್ಯ ಅಂಶಗಳು:
- ಕೊರೋನಾ ದಿಂದ ಜೀವ ಕಳೆದುಕೊಂಡ ಕುಟುಂಬಗಳ ನಿಮ್ಮ ದು:ಖದಲ್ಲಿ ನಾನು ಭಾಗಿಯಾಗುತ್ತೇನೆ.
- ಎಲ್ಲಾ ಫ್ರಂಟ್ ಲೈನ್ ವರ್ಕರ್ಗಳು ಶ್ರಮವಹಿಸಿ ಜನರ ಜೀವನ ರಕ್ಷಿಸಲು ಶ್ರಮಿಸುತ್ತಿದ್ದೀರಿ.
- ಕಠಿಣ ಸಮಯದಲ್ಲೂ ನಾವು ಎದೆಗುಂದಬಾರದು. ಸರಿಯಾದ ನಿರ್ಣಯ ತೆಗೆದುಕೊಂಡಾಗ ನಾವು ವಿಜಯರಾಗುತ್ತೇವೆ. ಇದೇ ಮಂತ್ರವನ್ನು ಮುಂದಿಟ್ಟುಕೊಂಡು ದೇಶ ದಿನ ರಾತ್ರಿ ಶ್ರಮಿಸುತ್ತಿದೆ.
- ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪ್ರೈವೇಟ್ ಸೆಕ್ಟರ್ ಎಲ್ಲವೂ ಜನರಿಗೆ ಆಕ್ಸಿಜನ್ ಸಿಗಬೇಕೆಂದು ಬಯಸುತ್ತದೆ. ಅದಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
- ಈ ಬಾರಿ ಕೊರೊನಾ ಕೇಸ್ ಹೆಚ್ಚಾದಂತೆ ದೇಶದ ಫಾರ್ಮಾ ಸೆಕ್ಟರ್ ಔಷಧಿಗಳ ಉತ್ಪಾದನೆ ಹೆಚ್ಚಿಸಿದೆ.
- ದೇಶದ ಪ್ರಮುಖ ಫಾರ್ಮಾ ಕಂಪನಿಗಳ ಜೊತೆಗೆ ಇಂದು ಸಭೆ ನಡೆಯಿತು. ವ್ಯಾಕ್ಸಿನ್ ತಯಾರಿಕೆ ಹೆಚ್ಚಿಸಲು ಎಲ್ಲರೂ ಕಟಿಬದ್ಧರಾಗಿದ್ದಾರೆ. ಇಂಥ ಬಲಾಢ್ಯ ಫಾರ್ಮಾ ಸೆಕ್ಟರ್ ಹೊಂದಿರುವುದು ದೇಶದ ಅದೃಷ್ಟ.
- ವ್ಯಾಕ್ಸಿನ್ನ ವೇಗ ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತ 2 ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಉತ್ಪಾದಿಸುತ್ತಿದೆ.
- ಇಂದು ಈ ಹೋರಾಟದಲ್ಲಿ ಎಲ್ಲಾ ಆರೋಗ್ಯ ಸಿಬ್ಬಂದಿ, ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಹಿರಿಯ ಜನರಿಗೆ ವ್ಯಾಕ್ಸಿನ್ ಸಿಗುತ್ತಿದೆ.
- ಮೇ 1 ರಿಂದ 18 ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗಲಿದೆ.
- ಇಲ್ಲಿವರೆಗೆ ಧೈರ್ಯದಿಂದ ಹೋರಾಟ ನಡೆಸಿದ್ದೇವೆ. ಅದರ ಶ್ರೇಯಸ್ಸು ಎಲ್ಲರಿಗೂ ಸಿಗುತ್ತದೆ. ನೀವು ಇಲ್ಲಿವರೆಗೆ ದೇಶವನ್ನು ತಂದಿದ್ದೀರಿ.. ನಾವು ಕೊರೊನಾದಿಂದ ಮುಕ್ತಿ ಹೊಂದುತ್ತೇವೆಂದು ನಂಬಿಕೆ ಇದೆ.
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ