December 25, 2024

Newsnap Kannada

The World at your finger tips!

mask

ಮಾಸ್ಕ್​ ಧರಿಸದ ವ್ಯಕ್ತಿ ದಂಡ ಕಟ್ಟಲು ನಿರಾಕರಣೆ : ವ್ಯಾಪಾರಿಗೆ ಕಪಾಳ ಮೋಕ್ಷ ಮಾಡಿದ ಎಸ್​ಪಿ

Spread the love

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಭಾನುವಾರ ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಪಾಲಿಕೆ ಕಮೀಷನರ್ ವಿಶ್ವನಾಥ್ ಮಾಸ್ಕ್ ಜಾಗೃತಿ ಅಭಿಯಾನ ಮಾಡಿದರು.

ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಬೆಳಗ್ಗೆ ಜಿಲ್ಲಾಧಿಕಾರಿ  ಹಾಗೂ ಎಸ್​​.ಪಿ ಹನುಮಂತರಾಯ ಮುಂದಾದರು. ಈ ವೇಳೆ ಎಸ್​ಪಿ, ಮಾಸ್ಕ್ ಧರಿಸದ ವ್ಯಾಪಾರಿಯೊಬ್ಬರ ಕೆನ್ನೆಗೆ ಬಾರಿಸಿದ ಘಟನೆಯೂ ನಡೆದಿದೆ.

ಡಿ.ಸಿ ಮಹಾಂತೇಶ್ ಬೀಳಗಿ ಹಾಗೂ ಎಸ್​.ಪಿ ಹನಮಂತರಾಯ ಮಾರುಕಟ್ಟೆಯಲ್ಲಿ ಜನರು ಮಾಸ್ಕ್ ಧರಿಸಿದ್ದಾರಾ ಎಂಬುದರ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಕ್ಲಾಸ್​ ತೆಗೆದುಕೊಂಡು. ನಿಯಮ ಉಲ್ಲಂಘಿಸಿದವರಿಗೆ ದಂಡವನ್ನೂ ವಿಧಿಸಲಾಯ್ತು.

ವ್ಯಾಪರಿಯೊಬ್ಬರು ಮಾಸ್ಕ್​ ಧರಿಸದ್ದಕ್ಕೆ ದಂಡ ನಿಡದೇ ವಾಗ್ವಾದಕ್ಕೆ ಇಳಿದರು. ಆಗ ಎಸ್​​ಪಿ ಹನಮಂತರಾಯ ವ್ಯಾಪಾರಿಯ ಕೆನ್ನೆಗೆ ಬಾರಿಸಿ ದಂಡ ಕಟ್ಟುವಂತೆ ತಾಕೀತು ಮಾಡಿದರು. ಬಳಿಕ ವ್ಯಾಪಾರಿಯನ್ನು ಪೊಲೀಸರು ಸ್ಥಳದಿಂದ ಕರೆದೊಯ್ದರು.

Copyright © All rights reserved Newsnap | Newsever by AF themes.
error: Content is protected !!