- ಮೆಡಿಕಲ್ ಕಾಲೇಜುಗಳಿಗೆ ಸಚಿವರ ರೌಂಡ್ಸ್ : ಪರಿಶೀಲನೆ
ಕಿಮ್ಸ್ ಹಾಗೂ ಬಿಎಂಸಿಆರ್ ಐ ಸೇರಿ ಒಟ್ಟು 1,800 ಹಾಸಿಗೆಗಳು ಕೋವಿಡ್ ಗೆ ಲಭ್ಯವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬಿಎಂಸಿಆರ್ ಐ, ಕಿಮ್ಸ್ ಹಾಗೂ ಸೆಂಟ್ ಜಾನ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸಚಿವರು ಮಾತನಾಡಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೆ 400 ಹಾಸಿಗೆಗಳನ್ನು ಕೋವಿಡ್ ಗೆ ನೀಡಲಾಗಿತ್ತು. ಈಗ ಒಟ್ಟು 750 ಹಾಸಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ಸಮೀಪದ ಎರಡು ಹೋಟೆಲ್ ಗಳನ್ನು ತಾತ್ಕಾಲಿಕ ಆಸ್ಪತ್ರೆ ಎಂದು ಗುರುತಿಸಿ, ಕಡಿಮೆ ಲಕ್ಷಣ ಇರುವವರಿಗೆ 200 ಹಾಸಿಗೆ ವ್ಯವಸ್ಥೆ ಮಾಡಲಾಗುವುದು. ಒಟ್ಟು 950 ಹಾಸಿಗೆಗಳನ್ನು ಬಿಎಂಸಿಆರ್‍ಐ ನಿರ್ವಹಣೆ ಮಾಡಲಿದೆ. ಇಲ್ಲಿ 70 ಐಸಿಯು ಹಾಸಿಗೆ ಇದ್ದು, 50-100 ಹೊಸ ಹಾಸಿಗೆ ಅಳವಡಿಸಲು ಯತ್ನಿಸುತ್ತಿದ್ದು, 15 ದಿನದೊಳಗೆ ಆಗಬಹುದು ಎಂದರು.
ಕಿಮ್ಸ್ ನಲ್ಲಿ ಕೋವಿಡ್ ಗೆ 500 ಹಾಸಿಗೆ ನೀಡಲು ಸೂಚಿಸಿದ್ದು, ಎರಡು ಮೂರು ದಿನದೊಳಗೆ ಲಭ್ಯವಾಗಲಿದೆ. ಸಮೀಪದ ಹೋಟೆಲ್ ಗುರುತಿಸಿ ತಾತ್ಕಾಲಿಕ ಆಸ್ಪತ್ರೆಯಾಗಿಸಲು ಸೂಚಿಸಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳಿಂದಲೇ 5,000 ಹಾಸಿಗೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿಗಳು ಆರೋಗ್ಯವಾಗಿದ್ದು, ಲಸಿಕೆ ಪಡೆದಿದ್ದರು. ಮುಖ್ಯಮಂತ್ರಿಗಳು ಆಸ್ಪತ್ರೆಯಿಂದಲೇ ಸೂಚನೆಗಳನ್ನು ನೀಡಲಿದ್ದಾರೆ. ಅದರಂತೆ, ಕೋವಿಡ್ ನಿಯಂತ್ರಣ ಕ್ರಮ ಕೈಗೊಳ್ಳುತ್ತೇವೆ. ಮಾಧ್ಯಮದವರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಲಸಿಕೆ ನೀಡಲು ಸೂಚಿಸಲಾಗಿದೆ ಎಂದರು.
ನಾನು ಕೂಡ ಕೊರೊನಾ ಯೋಧ. ವೈದ್ಯರು, ಡಿ ಗ್ರೂಪ್ ನೌಕರರು, ಅರೆವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿರುವಂತೆ ನಾನೂ ಕೂಡ ಕೊರೊನಾ ನಿಯಂತ್ರಿಸುವ ಹೆಚ್ಚಿನ ಜವಾಬ್ದಾರಿ ಹೊಂದಿದ್ದೇನೆ ಎಂದರು.
ಸೆಂಟ್ ಜಾನ್ಸ್ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದ ಸಚಿವರು, ಕೋವಿಡ್ ಗೆ ಹಾಸಿಗೆ ಮೀಸಲಿಡಲು ಹಾಗೂ ಸಮೀಪದ ಹೋಟೆಲ್ ನಲ್ಲಿ ಪರ್ಯಾಯ ಆಸ್ಪತ್ರೆಗೆ ವ್ಯವಸ್ಥೆ ಮಾಡಲು ಸೂಚಿಸಿದರು.
ನಂತರ ಮಾತನಾಡಿದ ಸಚಿವರು, ಕೋವಿಡ್ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಸೋಂಕು ನಿಯಂತ್ರಣಕ್ಕೆ ಕೆಲ ಚಟುವಟಿಕೆಗೆ ಕಡಿವಾಣ ಹಾಗೂ ಸಮರ್ಪಕ ಚಿಕಿತ್ಸೆ ಅಗತ್ಯ. ಹಾಗೆಯೇ ಲಸಿಕೆ ಪಡೆಯುವ ಮೂಲಕ ಮೂರನೇ ಅಲೆ ಬರುವುದನ್ನು ತಡೆಯಬೇಕು ಎಂದರು.
6 ಸಾವಿರ ಹಾಸಿಗೆ ಲಭ್ಯ
ಬೆಂಗಳೂರಿನ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಕೋವಿಡ್ ಗೆ ಒಟ್ಟು 6,000 ಹಾಸಿಗೆಗಳು ಲಭ್ಯವಿದ್ದು, 3869 ಹಾಸಿಗೆಗಳು ಭರ್ತಿಯಾಗಿದೆ. ಇನ್ನೂ 2,131 ಹಾಸಿಗೆಗಳು ಲಭ್ಯವಿದೆ. ಇನ್ನಷ್ಟು ಹೆಚ್ಚು ಹಾಸಿಗೆ ಲಭ್ಯವಾಗಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
- ಮಂಗಳೂರಿನಲ್ಲಿ ಬಾಲಕಿಗೆ ಸಾಮೂಹಿಕ ಅತ್ಯಾಚಾರ – ಮೂವರಿಗೆ ಜೀವಾವಧಿ ಶಿಕ್ಷೆ
- ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ ಮನೆಯ ಕೆಲಸದವರಿಂದ ಕಳ್ಳತನ – ದಂಪತಿ ಬಂಧನ
- ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
- ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ
- ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
More Stories
ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
ಮಂಡ್ಯ: ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಗಾಂಜಾ ಗಿಡಗಳು ಪತ್ತೆ!