ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ ರಿಗೆ ಇಂದಿನಿಂದ ಕೈಗೆ ಮುದ್ರೆ ಹಾಕಲು ಬಿಬಿಎಂಪಿ ನಿರ್ಧಾರ

Team Newsnap
1 Min Read

ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿರುವ ಬಿಬಿಎಂಪಿ , ಇಂದಿನಿಂದ ಕೊರೋನಾ ಸೋಂಕಿತರಿಗೆ ಸೀಲ್ ಹಾಕಲು ನಿರ್ಧರಿಸಿದೆ.

ಬಿಬಿಎಂಪಿ ಅಧಿಕಾರಿಗಳು, ಕೋವಿಡ್ ಸೋಂಕು ದೃಢಪಟ್ಟಿರುವವರ ಕೈಗಳಿಗೆ ಶನಿವಾರದಿಂದಲೇ ಅಳಿಸಲಾಗದ ಶಾಹಿಯಿಂದ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ (ಸೀಲ್)ನ್ನು ಹಾಕಲು ನಿರ್ಧರಿಸಿದೆ.

ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬಿಬಿಎಂಪಿ ಎಂಟು ವಲಯ ಮಟ್ಟದಲ್ಲಿ ಕೋವಿಡ್ ಸೋಂಕು ದೃಢಪಟ್ಟವರಿಗೆ ಸೀಲ್, ಹಾಸಿಗೆ ವ್ಯವಸ್ಥೆ ಕುರಿತು ವರ್ಚುಯಲ್ ಸಭೆ ನಡೆಸಿ ಅಕಾರಿಗಳಿಗೆ ಈ ಸೂಚನೆ ನೀಡಿದರು.

ಬೆಂಗಳೂರು ವ್ಯಾಪ್ತಿಯಲ್ಲಿ ಕೋವಿದ್ ಸೋಂಕು ದೃಢಪಟ್ಟವರಿಗೆ ಶನಿವಾರ ಕೈಗಳಿಗೆ ಸೀಲ್ ಹಾಕುವ ಕಾರ್ಯ ಪ್ರಾಂರಭಿಸಬೇಕು. ಈ ಕುರಿತು ಎಲ್ಲಾ ವಲಯಗಳಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು ಅದಕ್ಕೆ ಬೇಕಾದ ಶಾಹಿಯನ್ನು ಎಲ್ಲಾ ವಲಯಗಳಿಗೂ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿಗೆ ಸೂಚಿಸಿದ್ದಾರೆ.

ಸೋಂಕು ಕಂಡು ಬಂದ ಮನೆಯಲ್ಲೇ ಐಸೋಲೇಟ್ ಆಗಿರುವವರು ಹೊರಗೆ ಸಂಚರಿಸದಂತೆ ಮುದ್ರೆ ಹಾಕಬೇಕು. ಒಂದು ವೇಳೆ ಮುದ್ರೆ ಹಾಕಿಸಿಕೊಂಡವರು ತಿರುಗಾಡುವುದನ್ನು ಕಂಡರೆ ಮಾರ್ಷಲ್ ಗಳು, ಪೊಲೀಸರು, ಗೃಹ ರಕ್ಷಕರು, ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.

Share This Article
Leave a comment