ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಿ: ಚುನಾವಣಾ ಅಧಿಕಾರಿಯಿಂದ ಸರ್ಕಾರಕ್ಕೆ ಶಿಫಾರಸು

Team Newsnap
1 Min Read

ರಾಜ್ಯದ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆ ಮುಂದೂಡಲು ಚುನಾವಣೆ ಅಧಿಕಾರಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪತ್ರ ಬರೆದಿದ್ದಾರೆ.

ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಚುನಾವಣಾ ಅಧಿಕಾರಿ ಪಿ ಎನ್ ರವೀಂದ್ರ , ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ವಿಪರೀತವಾಗಿ‌ ಹಬ್ಬುತ್ತದೆ. ಈ ಕಾರಣಕ್ಕಾಗಿ ಒಕ್ಕಲಿಗರ ಸಂಘದ ಚುನಾವಣೆ ಮುಂದೂಡುವಂತೆ ಕೋರಿದ್ದಾರೆ.

ಸಂಘದಲ್ಲಿ 34 ಮಂದಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ನಾಮಪತ್ರ ಸಲ್ಲಿಸುವ ಕಾರ್ಯ ಆರಂಭವಾಗಿದೆ. ಕಿಮ್ಸ್ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಹೊರಗಿನವರು ಇಲ್ಲಿಗೆ ಬರುತ್ತಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1.90 ಲಕ್ಷ ಮತದಾರರು ಇದ್ದಾರೆ. ಮತದಾರ ಬಳಿ ಹೋಗಿ ಮತಯಾಚನೆ ಮಾಡುವುದು ಕಷ್ಟ ವಾಗುವ ಕಾರಣದಿಂದಾಗ ಚುನಾವಣೆ ಮುಂದೂಡುವಂತೆ ಸರ್ಕಾರವನ್ನು ಕೋರಿದ್ದಾರೆ.

ಈ ಕುರಿತಂತೆ ಸರ್ಕಾರದಿಂದ ಯಾವುದೇ ನಿರ್ದೇಶನವೂ ಬಂದಿಲ್ಲ. ಸರ್ಕಾರದ ಉತ್ತರಕ್ಕೆ ಕಾಣಲಾಗುತ್ತಿದೆ.

Share This Article
Leave a comment