December 25, 2024

Newsnap Kannada

The World at your finger tips!

WhatsApp Image 2020 10 14 at 184437jpeg

ಆಲ್‍ರೌಂಡರ್ ಸ್ಟೋಕ್ಸ್ ಕೈಗೆ ಗಾಯ – ಐಪಿಎಲ್ ಟೂರ್ನಿಯಿಂದ ಹೊರಕ್ಕೆ: ಆರ್ ಆರ್ ತಂಡಕ್ಕೆ ಆಘಾತ

Spread the love

ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ವೇಳೆ ಕೈಗೆ ಗಾಯ ಮಾಡಿಕೊಂಡ ನಂತರ ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪ್ರಕಾರ ಸ್ಟೋಕ್ಸ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದೆ ಹಾಗಾಗಿ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‍ನಿಂದಲೇ ಹೊರ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಐಪಿಎಲ್ ಆರಂಭಕ್ಕೂ ಮೊದಲೇ ರಾಜಸ್ಥಾನ ತಂಡದ ಇನ್ನೊರ್ವ ಆಲ್‍ರೌಂಡರ್ ಜೋಫ್ರಾ ಆರ್ಚರ್ ತಂಡದಿಂದ ದೂರ ಉಳಿದಿದ್ದರು ಇದೀಗ ಸ್ಟೋಕ್ಸ್ ಕೂಡ ಹೊರಗುಳಿಯುವಂತಾಗಿದೆ. ಇದರಿಂದ ರಾಜಸ್ಥಾನ್ ತಂಡ ಬಲಿಷ್ಠ ಆಲ್‍ರೌಂಡರ್ ಆಟಗಾರನ್ನು ಕಳೆದುಕೊಂಡಂತಾಗಿದೆ.

463c5278 stokes ruled out

ಸಾಮಾಜಿಕ ಜಾಲತಾಣದ ಮೂಲಕ ಪ್ರಕಟನೆ ಹೊರಡಿಸಿದ ಫ್ರಾಂಚೈಸಿ , ಸ್ಟೋಕ್ಸ್ ಗಾಯಗೊಂಡಿದ್ದರು ಕೂಡ ತಂಡದೊಂದಿಗೆ ಟೂರ್ನಿಯ ಅಂತ್ಯದ ವರೆಗೆ ಆಫ್‍ದಿಫೀಲ್ಡ್ ನಲ್ಲಿ ಜೊತೆಗಿರಲಿದ್ದಾರೆ. ಅವರ ಸೇವೆ ಅಗತ್ಯವಿದೆ ಎಂದು  ಫ್ರಾಂಚೈಸಿ  ತಿಳಿಸಿದೆ.

Copyright © All rights reserved Newsnap | Newsever by AF themes.
error: Content is protected !!