February 23, 2026

Newsnap Kannada

The World at your finger tips!

vinay car

ದಾರವಾಡ: ವಿಜಯ್ ಕುಲಕರ್ಣಿ ಕಾರ್ ಢಿಕ್ಕಿ – ಇಬ್ಬರ ಸಾವು,ಆರು ಮಂದಿಗೆ ಗಾಯ

Spread the love

ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರ್ ರಸ್ತೆ ಪಕ್ಕ ನಿಂತವರ ಮೇಲೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ಆರು ಜನರು ಗಾಯಗೊಂಡ ಘಟನೆ ಧಾರವಾಡದಲ್ಲಿ ಸೋಮವಾರ ಜರುಗಿದೆ.

ಕಾರ್​ ಹರಿದ ಪರಿಣಾಮ ರಸ್ತೆ ಪಕ್ಕ ನಿಲ್ಲಿಸಲಾಗಿದ್ದ ಐದಾರು ಬೈಕ್​ಗಳು ಸಹ ಜಖಂಗೊಂಡಿವೆ.

ಈ ಘಟನೆಯಲ್ಲಿ ಶೇಖರ ಮತ್ತು ಚರಣ ಸಾವನ್ನಪ್ಪಿದ್ದಾರೆ.

ಧಾರವಾಡದ ಕೆವಿಜಿ ಬ್ಯಾಂಕ್ ಎದುರು ಅಪಘಾತದ ನಂತರ ಸ್ಥಳದಿಂದ ವಿಜಯ್ ಕುಲಕರ್ಣಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಬೆಳಗಾವಿಯಿಂದ ಧಾರವಾಡಕ್ಕೆ ವಿಜಯ್ ಕುಲಕರ್ಣಿ ಪ್ರಯಾಣಿಸುವ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಗಾಯಗೊಂಡ ಆರು ಜನರಿಗೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!