February 23, 2026

Newsnap Kannada

The World at your finger tips!

teacher, learning, school

Just for fun, I threatened with a bomb call - statement of a minor boy ಜಸ್ಟ್ ಫಾರ್ ಫನ್‍ ಗೆ ಬಾಂಬ್ ಬೆದರಿಕೆ ಹಾಕಿದ್ದೆ – ಅಪ್ರಾಪ್ತ ಬಾಲಕ ಹೇಳಿಕೆ

ಕೊರೋನಾ 2 ನೇ ಅಲೆ ಸ್ಪೋಟ : ಏಪ್ರಿಲ್ 20ರ ನಂತರವೂ ಶಾಲೆಗಳ ರಜೆ ಮುಂದುವರೆಸಿ – ತಜ್ಞರ ಸಲಹೆ

Spread the love

ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ ರಾಜ್ಯದಲ್ಲಿ ಏಪ್ರಿಲ್ 20ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ ಕೊರೋನಾ ಭೀತಿ‌ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶಾಲೆಗಳ ರಜೆಯನ್ನು ಮತ್ತಷ್ಟು ದಿನ ಮುಂದುವರೆಸಿರಿ ಎಂದು ತಜ್ಞರು ‌ಸರ್ಕಾರಕ್ಕೆ ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ.

ರಾಜ್ಯದಲ್ಲಿ ಸರಾಸರಿ 5 ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣಗಳ ವರದಿ ಆಗುತ್ತಿರುವ ಹಿನ್ನೆಲೆ ಶಾಲೆಗಳನ್ನು ಪ್ರಾರಂಭ ಮಾಡೋದು ಬೇಡ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ಗೊತ್ತಾಗಿದೆ. ‌ಅಲ್ಲದೇ ಈ ಹಿಂದೆಯೂ ತಜ್ಞರ ಸಲಹೆ ಮೇರೆಗೆ ಸರ್ಕಾರ ಎರಡು ವಾರ ಶಾಲೆಗಳಿಗೆ ರಜೆ ನೀಡಿತ್ತು.

ತಜ್ಙರು ಈಗ ನೀಡಿರುವ ಸಲಹೆಗಳು ಏನು?

  • ಏಪ್ರಿಲ್ 20ರವರೆಗೆ ನೀಡಿರುವ ರಜೆಯನ್ನು ಏಪ್ರಿಲ್ ಅಂತ್ಯದವರೆಗೆ ವಿಸ್ತರಣೆ ಮಾಡಿ.
  • ಕೊರೊನಾ ಸೋಂಕು ಕಂಟ್ರೋಲ್ ಗೆ ಬರೋವರೆಗೂ ಶಾಲೆ ಪ್ರಾರಂಭ ಬೇಡ.
  • ಪರಿಸ್ಥಿತಿ ನೋಡಿಕೊಂಡು ರಜೆ ಅವಧಿ ವಿಸ್ತರಣೆ ಮಾಡು ಬಗ್ಗೆ ನಿರ್ಧಾರ ಮಾಡಿ.
  • ಬೆಂಗಳೂರಿನಲ್ಲಿ ದಿನೇ ದಿನೇ ಕೇಸ್ ಹೆಚ್ಚಳ ಆಗ್ತಿದೆ. ಹೀಗಾಗಿ ಈ ಸಮಯಲ್ಲಿ ಶಾಲೆ ಪ್ರಾರಂಭ ಬೇಡ.
  • ಶಾಲೆ ಪ್ರಾರಂಭ ಆದ್ರೆ ಮತ್ತೆ ಸೋಂಕು ಹೆಚ್ಚಳ ಆಗಬಹುದು. 10 ಮತ್ತು 12 ನೇ ತರಗತಿಗಳಿಗೆ ಈಗ ನಡೆಯುತ್ತಿರುವಂತೆಯೇ ಶಾಲೆ ನಡೆಸಿ.
  • 10-12 ನೇ ತರಗತಿಗಳ ಪರೀಕ್ಷೆಗಳನ್ನು ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಿ.
  • 1-9 ನೇ ತರಗತಿಗಳಿಗೆ ಸದ್ಯಕ್ಕೆ ಕೊರೊನಾ ಕಂಟ್ರೋಲ್ ಗೆ ಬರೋವರೆಗೂ ಪರೀಕ್ಷೆ ನಡೆಸುವುದು ಬೇಡ.
  • ಪರೀಕ್ಷೆ ಮಾಡಲೇಬೇಕಾದ್ರೆ ಆನ್‍ಲೈನ್ ನಲ್ಲಿ ನಡೆಸೋದು ಸೂಕ್ತ.
  • ಪಠ್ಯ ಬೋಧನೆಗೆ ಆನ್ ಲೈನ್, ಯೂಟ್ಯೂಬ್, ದೂರದರ್ಶನ ಸೇರಿದಂತೆ ಇನ್ನಿತರ ಮಾರ್ಗಗಳನ್ನು ಸದ್ಯಕ್ಕೆ ಮುಂದುವರಿಸಿ.
error: Content is protected !!