ಬಿಎಂಟಿಸಿ ಸಂಚಾರ ಬಂದ್: 10 ಲಕ್ಷ ರು. ಪರಿಹಾರಕ್ಕಾಗಿ ಶಿಖಾ, ಕೋಡಿಹಳ್ಳಿಗೆ ವಿದ್ಯಾರ್ಥಿನಿ ಲೀಗಲ್ ನೋಟಿಸ್

Team Newsnap
1 Min Read
Free bus pass - only up to 50 K.M from home ? ಉಚಿತ ಬಸ್ ಪಾಸ್ - ಮನೆಯಿಂದ 50 K.M ವರೆಗೆ ಮಾತ್ರ ?

ಬಿಎಂಟಿಸಿ ಸಂಚಾರ ಬಂದ್ ಹಿನ್ನಲೆ ಪರಿಹಾರ ಕೇಳಿ ತುಮಕೂರು ಮೂಲದ ಪಾವನ ಎಂಬ ವಿದ್ಯಾರ್ಥಿನಿ ಲೀಗಲ್ ನೋಟಿಸ್​ ಕೊಟ್ಟಿದ್ದಾಳೆ.

10 ಲಕ್ಷ ರು ಪರಿಹಾರ ಕೇಳಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಬಿಎಂಟಿಸಿ ಎಂಡಿಗೆ ವಿದ್ಯಾರ್ಥಿನಿ ಪಾವನ, ವಕೀಲ ರಮೇಶ್ ನಾಯಕ್ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದಾಳೆ.

ಪಾವನ, ಕೆಂಗೇರಿ ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ಕಾಲೇಜಿನ ಬಿಇ ಮೊದಲ ಸೆಮಿಸ್ಟರ್​​ನಲ್ಲಿ ಓದುತ್ತಿದ್ದಾಳೆ.

ಇಂದಿಗೆ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬಸ್ ಸಂಚಾರ ಬಂದ್ ಆಗಿದೆ, ಪಾಸ್ ಹೊಂದಿದ್ದರೂ ಯಾವುದೇ ಪ್ರಯೋಜನವಿಲ್ಲ. ನಾವು ಬಿಎಂಟಿಸಿ ವಾರ್ಷಿಕ ಬಸ್ ಪಾಸ್ ಖರೀದಿಸಿದ್ದೇನೆ. ಪಾಸ್ ಇದ್ದರೂ ಬಸ್ ಸೇವೆ ಇಲ್ಲದೇ ಹೆಚ್ಚುವರಿ ಹಣ ಪಾವತಿಸಿ ಓಡಾಡುವಂತಾಗಿದೆ. ಪಾಸ್ ಹೊಂದಿರುವರಿಗೆ ಬಸ್ ಸೌಲಭ್ಯ ಒದಗಿಸದಿರೋದು ಸೇವಾ ನ್ಯೂನ್ಯತೆ ಹಾಗೂ ಅನುಚಿತ ವ್ಯಾಪಾರ ಪದ್ದತಿಯಾಗಿದೆ. ಈ ಕಾರಣಕ್ಕಾಗಿ ಹತ್ತು ಲಕ್ಷ ರು ಪರಿಹಾರ ಕೊಡುವಂತೆ ಲೀಗಲ್ ನೋಟಿಸ್​ನಲ್ಲಿ ಆಗ್ರಹಿಸಿದ್ದಾಳೆ.

Share This Article
Leave a comment