February 23, 2026

Newsnap Kannada

The World at your finger tips!

karona

ಬೆಂಗಳೂರಲ್ಲಿ ಹೆಚ್ಚಾದ ಕೊರೋನಾ ಹಾವಳಿ: ರಾಜ್ಯದಲ್ಲಿ 35 ಮಂದಿ ಸಾವು

Spread the love

ಬೆಂಗಳೂರಲ್ಲಿ ಬುಧವಾರ 4991 ಮಂದಿಗೆ ಕೊರೋನಾ ಸೋಂಕು ದೃಡವಾಗಿದೆ. ರಾಜ್ಯದಲ್ಲಿ 35 ಮಂದಿ ಸಾವು ಸಂಭವಿಸಿದೆ.

ರಾಜ್ಯದಲ್ಲಿ ಬುಧವಾರ 8433 ರೆಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 116957 ಆರ್​ಟಿಪಿಸಿಆರ್ ಟೆಸ್ಟ್​ಗಳು ಸೇರಿದಂತೆ ಒಟ್ಟು 125390 ಕೊರೊನಾ ಟೆಸ್ಟ್​ಗಳನ್ನು ನಡೆಸಲಾಗಿದೆ.

ಈ ಪೈಕಿ ಇಂದು 6976 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ಸೋಂಕಿಗೊಳಗಾದವರ 10,33, 560ಕ್ಕೆ ಏರಿಕೆಯಾಗಿದೆ.

ಬುಧವಾರ 2794 ಸೋಂಕಿತರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 9,71556ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿನಿಂದಾಗಿ 35 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 12,731 ಮಂದಿ ಸೋಂಕಿನಿಂದ ಸಾವನ್ನಪ್ಪಿದಂತಾಗಿದೆ.

ಸದ್ಯ ರಾಜ್ಯದಲ್ಲಿ 49,254 ಪಾಸಿಟಿವ್ ಕೇಸ್​ಗಳಿವೆ. ಈ ಪೈಕಿ 353 ಸೋಂಕಿತರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ಬುಲೆಟಿನ್​ನಲ್ಲಿ ತಿಳಿಸಿದೆ.

error: Content is protected !!