ಉತ್ತರ ಕೊರಿಯಾ ಪರಿಸ್ಥಿತಿ ತೀರಾ ಕೆಟ್ಟದಾಗಿದೆ – ಸರ್ವಾಧಿಕಾರಿ ಕಿಮ್

Team Newsnap
1 Min Read

ಉತ್ತರ ಕೊರಿಯಾ ಹಿಂದೆಂದಿಗಿಂತಲೂ ಕಂಡರಿಯದ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆಯಂತೆ.

ಆ ರಾಷ್ಟ್ರದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತನ್ನು ಹೇಳಿದ್ದಾನೆ.

ಕಳೆದ ಸೋಮವಾರ ಪೊನ್​ಯಾಂಗ್​ನಲ್ಲಿ ನಡೆದ ಕಿಮ್ ಜಾಂಗ್ ಉನ್ ಪಕ್ಷದ ಪ್ರಾಥಮಿಕ ಸದಸ್ಯರ ಸಮಾವೇಶದಲ್ಲಿ ಈ ಮಾತನ್ನು ಜಾಂಗ್ ಉನ್ ಹೇಳಿದ್ದಾರೆ

ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಈ ವಿಷಯವನ್ನು ಅಸೋಷಿಯೇಟ್ ಪ್ರೆಸ್ ವರದಿ ಮಾಡಿದೆ.

ಕರೊನಾವೈರಸ್ ಲಾಕ್​ಡೌನ್​ ಪರಿಣಾಮವಾಗಿ ಡೊನಾಲ್ಡ್​ ಟ್ರಂಪ್ ನ್ಯೂಕ್ಲಿಯರ್ ಚಟುವಟಿಕೆ ವಿರೋಧಿಸಿ ತಮ್ಮ ಮೇಲೆ ಹೇರಿದ್ದ ಆರ್ಥಿಕ ದಿಗ್ಭಂಧನದಿಂದಾಗಿ ದೇಶ ಇಂದು ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದು ಸರ್ವಾಧಿಕಾರಿ ಕಿಮ್ ಅಳಲು ತೋಡಿಕೊಂಡಿದ್ದಾರೆ.

ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸುವುದು ನಮಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ ಎಂದು ಕಿಮ್ ಹೇಳಿದ್ದಾರೆ.

ನಮಗೆ ಸುಸ್ಥಿರ ಅಭಿವೃದ್ಧಿ ಬೇಕಾಗಿದ್ದು, ಅನಿರೀಕ್ಷಿತ ಬೆಳವಣಿಗೆಗಳಿಂದ ಎದುರಾಗುವ ಸಮಸ್ಯೆಗಳನ್ನು ತ್ವರಿತವಾಗಿ ನಿರ್ಮೂಲನೆ ಮಾಡಲು ಆಗುವುದಿಲ್ಲ ಎಂದು ಕಿಮ್ ಹೇಳಿದ್ದಾರೆ.

Share This Article
Leave a comment