February 23, 2026

Newsnap Kannada

The World at your finger tips!

jamir kumar

ಅಲ್ಲಾ ಮೇಲೆ ನಂಬಿಕೆ, ಗೌರವ ಇದ್ದರೆ 10 ಕೋಟಿ ರು ಪಡೆದಿದ್ದನ್ನು ಸಾಬೀತು ಮಾಡಲಿ- ಜಮೀರ್​​ಗೆ ಎಚ್ ಡಿಕೆ ಸವಾಲು

Spread the love

ಜಮೀರ್ ಗೆ ಅಲ್ಲಾನ ಮೇಲೆ ನಂಬಿಕೆ, ಗೌರವ ಇದ್ದರೆ ನಾನು 10 ಕೋಟಿ ರು ಪಡೆದಿದನ್ನು ಸಾಬೀತು ಪಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಇಂದು ಸವಾಲು ಹಾಕಿದರು.

ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕೆ ಬೀದರ್ ನ ಬಸವಕಲ್ಯಾಣದ ಉಪ ಚುನಾವಣೆಯಲ್ಲಿ ಮತಗಳನ್ನು ಇಬ್ಭಾಗ ಮಾಡಲು ಜೆಡಿಎಸ್ ಅಭ್ಯರ್ಥಿ ಹಾಕಿದ್ದಾರೆ ಎಂಬ ಕಾಂಗ್ರೆಸ್​​ ಶಾಸಕ ಜಮೀರ್ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು ನೀಡಿ, ಜಮೀರ್ ಗೆ ಅಲ್ಲಾನ ಮೇಲೆ ನಂಬಿಕೆ, ಗೌರವ ಇದ್ದರೆ ನಾನು 10 ಕೋಟಿ ರೂಪಾಯಿ ಪಡೆದಿದನ್ನು ಸಾಬೀತು ಪಡಿಸಲಿ.ದೇವರೇ ಎಲ್ಲವನ್ನು ನೋಡಿ ಕೊಳ್ಳುತ್ತಾನೆ. ಅವರ ಬಗ್ಗೆ ಮಾತನಾಡಿ ಕೊಳಚೆ ಮೇಲೆ ಯಾಕೆ ನಾನು ಕಲ್ಲು ಎಸೆಯಲಿ ಎಂದರು.

ಜಮೀರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್​​ಡಿಕೆ, ಇಂತಹವರ ಬಗ್ಗೆ ಮಾತನಾಡುವುದ ವ್ಯರ್ಥ. ಅವರನ್ನು ಚಾಮರಾಜಪೇಟೆಯಲ್ಲಿ ಬಿಜೆಪಿ ಪಕ್ಷ ಗೆಲ್ಲಲು ನಿಲ್ಲಿಸಿದ್ದೇವಾ..? ಅವರಿಗೆ ಪಕ್ಷ ಕಟ್ಟುವುದು ಅಗತ್ಯವಿಲ್ಲ. ಯಾರು ಯಾರನ್ನೋ ಹಿಡಿದು ರಾಜಕಾರಣ ಮಾಡ್ತಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ಗೆ ಯಾವ ಶಕ್ತಿ ಇದೆ. ಅಲ್ಲಿ ಇವರು ಬಿಜೆಪಿಯನ್ನು ಗೆಲ್ಲಿಸಲು ಟಿಎಂಸಿ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿದ್ದರಾ..? ಎಂದು ಪ್ರಶ್ನೆ ಮಾಡಿದರು.

ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ. ಈ ಹಿಂದೆ 2004ರಲ್ಲಿ ಚಾಮರಾಜಪೇಟೆಯಲ್ಲಿ ಅವರನ್ನು ಯಾಕೆ ನಿಲ್ಲಿಸಿದ್ವೀ..? ಮೊದಲ ಬಾರಿಗೆ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಯಾರು ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿರಲಿಲ್ಲ. ಅವರನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದಾಗ ಅವರು ನನಗೆ ಎಷ್ಟು‌ ಮನೆಗಳನ್ನು ಕರೆದುಕೊಂಡು ಹೋದರು. ಅವರು ಹಿಂದೆ ಹೇಗಿದ್ರು ಈಗ ಹೇಗಾದ್ರು ಅವರೇ ಹೇಳಲಿ. ಈ ಹಿಂದೆ ಜನತಾದಳ ಲೀಡರ್​​ಗಳನ್ನು ಬೆಳೆಸುವ ಪಕ್ಷ ಅಂತಾ ಜಮೀರ್ ಹೇಳಿದ್ದು ಈಗ ಮರೆತು ಹೋಗಿದೆ ಎಂದರು.

error: Content is protected !!