February 23, 2026

Newsnap Kannada

The World at your finger tips!

yediyurappa 1

ಮೈಸೂರು ಪತ್ರಕರ್ತನಕುಟುಂಬಕ್ಕೆ 5ಲಕ್ಷ ನೆರವು ನೀಡಿದ ಸಿಎಂ

Spread the love

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ)ಮನವಿ ಮೇರೆಗೆ ಇತ್ತೀಚೆಗೆ ಮೃತಪಟ್ಟ
ಪತ್ರಕರ್ತರಾದ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ (ರಾಜ್ಯ ಧರ್ಮ ಮತ್ತು ಮೈಸೂರು ದಿಗಂತ, ಸಾದ್ವಿ ಪತ್ರಿಕೆಯಲ್ಲಿ ಸೇವೆ) ಮಂಜುನಾಥ್ ಕುಟುಂಬಕ್ಕೆ
5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.

ಪತ್ರಕರ್ತ ಎಂ.ಮಂಜುನಾಥ್
ಕುಟುಂಬಕ್ಕೆ ನೆರವು ನೀಡುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು, ರಾಜ್ಯ ಸಂಘಕ್ಕೆ ಮನವಿ ಮಾಡಿತ್ತು.

ಸಂಕಷ್ಟದಲ್ಲಿದ್ದ ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ಮಂಜೂರು ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!