2 ವರ್ಷದ ಪ್ರೀತಿಸಿ ಇನ್ನೇನು ಎರಡು ದಿನ ಬಾಕಿ ಇರುವ ವೇಳೆಗೆ ನಾಪತ್ತೆಯಾದ ಪ್ರಿಯಕರನ ವಿರುದ್ಧ ಪ್ರಿಯತಮೆ ಪೋಲಿಸರಿಗೆ ವಂಚನೆ ದೂರು ನೀಡಿದ್ದಾಳೆ
ತಾನೇ ಪ್ರೀತಿಸಿ ದ ಯುವತಿ ಜೊತ ಮದುವೆಗೆ ಇನ್ನೆರಡುದಿನ ಬಾಕಿ ಇರಬೇಕೆಂದರೆ ಮದುವೆ ಇಷ್ಟವಿಲ್ಲ ಎಂದು ಫೋನ್ ಮಾಡಿ ನಾಪತ್ತೆಯಾದ ಅಂಬ್ಯುಲೆನ್ಸ್ ಚಾಲಕನ ವಿರುದ್ದ ಈಗ ಬೆಂಗಳೂರಿನ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎರಡು ವರ್ಷದ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿದೆ ಇನ್ನೆರಡು ದಿನದಲ್ಲಿ ನಾನು ಪ್ರೀತಿಸಿದವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುತ್ತೇನೆ ಎಂದು ಸಂಭ್ರಮಿಸುತ್ತಿದ್ದ ಯುವತಿಗೆ ಆಕೆಯ ಪ್ರಿಯಕರನಿಂದ ಆಘಾತ ಎದುರಾಗಿದೆ.
ಆರೋಪಿ ಸೋಮಶೇಖರ್ ಚನ್ನರಾಯಪಟ್ಟಣ ದ ಮೂಲದವನು. ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕಳೆದೆರಡು ವರ್ಷಗಳ ಹಿಂದೆ ನಾಗರಭಾವಿಯಲ್ಲಿ ವಾಸವಿರುವ ಈ ಯುವತಿಯ ಜೊತೆ ಪ್ರೇಮಾಂಕುರವಾಗಿತ್ತು. ಸದ್ಯ ಇಬ್ಬರ ಮನೆಯಲ್ಲೂ ಈ ಪ್ರೀತಿಗೆ ಒಪ್ಪಿಗೆ ನೀಡಲಾಗಿದ್ದು, ಪ್ರೀತಿ ಮದುವೆ ಹಂತಕ್ಕೆ ಬಂದಿತ್ತು.
ಕಳೆದ ವರ್ಷ ಮೇ ನಲ್ಲಿ ಆರೋಪಿ ಮತ್ತು ಯುವತಿಗೆ ನಿಶ್ಚಿತಾರ್ಥ ಆಗಿತ್ತು, ಆದರೆ ಕೊರೋನಾ ಕಾರಣ ನೀಡಿ ಆರೋಪಿ ಮದುವೆಯನ್ನು ಮುಂದಕ್ಕೆ ಹಾಕಿದ್ದನು.
ನಿಶ್ಚಿತಾರ್ಥ ಆದ ಮೇಲೆ ಸಾಲ ಆಗಿದೆ. ಹೊಸ ವಾಹನ ತೆಗೆದುಕೊಳ್ಳಬೇಕು ಅಂತ 8 ಲಕ್ಷ ರುಗಳನ್ನು ಯುವತಿ ಮನೆಯವರಿಂದ ಕಿತ್ತುಕೊಂಡಿದ್ದಾನೆ.
ಕೊನೆಗೆ ಮನೆಯವರು ಸೇರಿ ಕಳೆದ ಮಾರ್ಚ್ 24ಕ್ಕೆ ಮದುವೆಯ ದಿನ ಫಿಕ್ಸ್ ಮಾಡಿದ್ದಾರೆ. ಮದುವೆಗೆ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದ್ದ ಯುವತಿ ಕುಟುಂಬದವರು ಮನೆಮುಂದೆ ಚಪ್ಪರ ಸೇರಿ ಎಲ್ಲಾವನ್ನೂ ಮಾಡಿಕೊಂಡಿದ್ದರು. ಮದುವೆಗೆ ಇನ್ನೇನು ಎರಡೇ ದಿನ ಬಾಕಿ ಇರುವಾಗ ಯುವತಿಗೆ ಕರೆ ಮಾಡಿದ ಆರೋಪಿ ನನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿ ಪೋನ್ ಕಟ್ ಮಾಡಿದ್ದಾರೆ. ಆನಂತರ ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ಪ್ರಿಯತಮನ ವರ್ತನೆಯಿಂದ ಬೇಸತ್ತ ಯುವತಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ