ಸಿಡಿ ಪ್ರಕರಣದಲ್ಲಿ ನಾನು ನಿಜವಾದ ಸಂತ್ರಸ್ತೆ. ಆದರೆ ಆರೋಪಿಯೋ? ಸಂತ್ರಸ್ತೆಯೋ? ಎಂಬುದು ಗೊಂದಲವಾಗಿದೆ. ನಾನು ಆರೋಪಿ ಅಲ್ಲದಿದ್ರೂ ಪ್ರತಿದಿನ ವಿಚಾರಣೆ. ನ್ಯಾಯ ಸಮ್ಮತವಾಗಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ ಎಂದು ಸಿಡಿ ಯುವತಿ
ಬೆಂಗಳೂರು ಪೊಲೀಸ್ ಆಯುಕ್ತರಿಗೆ 3 ಪುಟಗಳ ಪತ್ರ ಸಮರ ಸಾರಿದ್ದಾಳೆ.
ನಾನು ಆರೋಪಿಯಿಲ್ಲ. ಅದರೂ ಪ್ರತಿದಿನ ವಿಚಾರಣೆ ನೆಪದಲ್ಲಿ ಕರೆದು ಕಿರುಕುಳ ನೀಡುತ್ತಾರೆ. ಆರೋಪಿಯನ್ನು ಕೇವಲ ಎರಡು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿ ಬಿಟ್ಟು ಕಳಿಸುತ್ತಾರೆ. ಆದರೆ ನನ್ನನ್ನು ಇಡೀ ದಿನ ವಿಚಾರಣೆ ಮಾಡುತ್ತಾರೆ ಎಂದು ಆರೋಪಿಸಿ ಸಂತ್ರಸ್ತೆ ಪೊಲೀಸ್ ಆಯುಕ್ತರಿಗೆ ಪತ್ರದಲ್ಲಿ ವಿವರಿಸಿದ್ದಾಳೆ.
ಆರೋಪಿ ವಿರುದ್ಧ ಗಂಭೀರವಾದ ವಿಚಾರಣೆ ಮಾಡ್ತಿದ್ದಾರೆ ಅನ್ನೊ ನಂಬಿಕೆ ನನಗೆ ಇಲ್ಲ. ನಾನು ಆರೋಪಿ ಅಲ್ಲದಿದ್ರೂ ಪ್ರತಿದಿನ ವಿಚಾರಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರಲಿ ಅಂದಿದ್ದಾರೆ. ಇದು ನನಗೆ ಆಘಾತವನ್ನು ಉಂಟು ಮಾಡಿದೆ. ಆರೋಪಿ ವಿರುದ್ಧ ಗಂಭೀರವಾದ ವಿಚಾರಣೆ ಮಾಡ್ತಿದ್ದಾರೆ ಅನ್ನುವ ನಂಬಿಕೆಯಿಲ್ಲ. ನಾನು ಆರೋಪಿ ಅಲ್ಲದಿದ್ದರೂ ಆರ್ ಟಿ ನಗರದ ನನ್ನ ಪಿಜಿ ಮೇಲೆ ದಾಳಿ ಮಾಡಿ ಸಾಕ್ಷಿ ನಾಶ ಮಾಡುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.
ಎಸ್‍ಐಟಿ ರಮೇಶ್ ಜಾರಕಿಹೊಳಿ ಯನ್ನು ಓಡಾಡಿಕೊಂಡಿರಲು ಬಿಟ್ಟು ಪ್ರತಿ ದಿನ ನನ್ನ ವಿಚಾರಣೆ ಮಾಡುತ್ತಿದ್ದಾರೆ. ನ್ಯಾಯ ಸಮ್ಮತವಾಗಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ ಅಂತಾ ನನಗೆ ಅನ್ನಿಸ್ತಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ