February 22, 2026

Newsnap Kannada

The World at your finger tips!

girl 4

ಸಿಡಿ ಗ್ಯಾಂಗ್‍ನ ಕಿಂಗ್‍ಪಿನ್‍ಗಳ ಬಗ್ಗೆ ಸುಳಿವು , ಮಾಹಿತಿ ನೀಡದ ಯುವತಿ

Spread the love

ವಿಶೇಷ ತನಿಖಾ ತಂಡದ ಪೊಲೀಸರ ವಿಚಾರಣೆಯ ವೇಳೆ ಸಿಡಿ ಲೇಡಿ ಸಿಡಿ ಗ್ಯಾಂಗ್‍ನ ಕಿಂಗ್ ಪಿನ್‍ಗಳ ಬಗ್ಗೆ ಯಾವುದೇ ಮಾಹಿತಿ, ಸುಳಿವು ಕೊಟ್ಟಿಲ್ಲ.

ಸಿಡಿ ಗ್ಯಾಂಗ್ ಸದಸ್ಯರು ಬೆಂಗಳೂರನ್ನು ಒಟ್ಟಿಗೆ ತೊರೆದ ಬಳಿಕ ಬೇರೆ ಬೇರೆ ರಾಜ್ಯಗಳನ್ನು ಸುತ್ತಿದ್ದರು. ನರೇಶ್ ಗೌಡ ಮತ್ತು ಶ್ರವಣ್ ಜೊತೆ ಯುವತಿಯು ತೆರಳುತ್ತಿದ್ದ ಮಾಹಿತಿ ಎಸ್‍ಐಟಿಗೆ
ಸಿಕ್ಕಿದ್ದರೂ ಪೊಲೀಸರು ಆ ಸ್ಥಳಕ್ಕೆ ತೆರಳಿದಾಗ ಸಿಡಿ ಗ್ಯಾಂಗ್ ಸದಸ್ಯರು ಪರಾರಿಯಾಗುತ್ತಿದ್ದರು. ಯುವತಿ, ಕಿಂಗ್‍ಪಿನ್‍ಗಳ ಮೊಬೈಲ್ ಟವರ್ ಲೋಕೇಷನ್ ಗಳು ಹಲವು ಸಂದರ್ಭದಲ್ಲಿ ಒಂದೇ ಕಡೆ ಇದ್ದ ಹಿನ್ನೆಲೆಯಲ್ಲಿ ಯುವತಿಗೆ ಪೊಲೀಸರು ಪ್ರಶ್ನೆ ಕೇಳಿದ್ದರು.

boys

ವಿಚಾರಣೆ ಸಂದರ್ಭದಲ್ಲಿ ಶ್ರವಣ್, ನರೇಶ್ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ಸೂಚನೆ ನೀಡಿದ್ದಾರೆ.

error: Content is protected !!