ಸಿಡಿ ಲೇಡಿ ಹಣ ವ್ಯವಹಾರದಲ್ಲಿ‌ ಮಾಜಿ ಸಚಿವ ಡಿ ಸುಧಾಕರ್ ‌ಪಾತ್ರ – ಎಸ್ ಐಟಿ ಯಿಂದ ನೋಟೀಸ್ ಸಾಧ್ಯತೆ

Team Newsnap
2 Min Read

ಸಿಡಿ ಯುವತಿಯ ತನಿಖೆಯ ನಂತರ ಎಸ್ ಐಟಿಗೆ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

ಮಾಜಿ ಸಚಿವ ಡಿ. ಸುಧಾಕರ್ ಸಿಡಿ ಯುವತಿ ಜತೆ ಅತಿ ಹೆಚ್ಚು ಬಾರಿ ಫೋನ್​ನಲ್ಲಿ ಮಾತನಾಡಿರುವುದು ಎಸ್​ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ

ಚಿತ್ರದುರ್ಗ ಮೂಲದ ಡಿ. ಸುಧಾಕರ್ ಈ ಹಿಂದೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಸಿಡಿ ಬಿಡುಗಡೆಗೂ ಎರಡು ದಿನ ಮುನ್ನ ಸಿಡಿ ಪ್ರಕರಣದಲ್ಲಿ ಇದ್ದಾಳೆ ಎನ್ನುವ ಯುವತಿ ಬಳಿ ಡಿ.ಸುಧಾಕರ್ ಹಣದ ವ್ಯವಹಾರ ನಡೆಸಿರುವ ಬಗ್ಗೆ ತನಿಖೆ ವೇಳೆ ಸುಳಿವು ದೊರೆತಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾಜಿ ಸಚಿವ ಡಿ.ಸುಧಾಕರ್​ಗೆ ನೋಟಿಸ್​​ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಡಿ. ಸುಧಾಕರ್ ಯಾರು ?

2004ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2008 ಮತ್ತು 2013ರಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಲೂ ಗೆದ್ದಿದ್ದರು. ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು. ಸದ್ಯ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿಯೂ ಮಾಜಿ ಸಚಿವ ಡಿ.ಸುಧಾಕರ್​ ಸಿಡಿ ಸಂತ್ರಸ್ತೆಯ ಜತೆ ಕರೆ ಮಾಡಿ ಮಾತನಾಡಿದ್ದರು ಎಂಬುದು ಗೊತ್ತಾಗಿದೆ.

ನನಗೆ ಯಾವುದೇ ಸಂಬಂಧ ಇಲ್ಲ ಡಿ.ಸುಧಾಕರ್ :

​ಸಿಡಿ ಸಂತ್ರಸ್ತೆ ಜತೆ​ ನಂಟು ಹೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಡಿ.ಸುಧಾಕರ್ ‘ನನಗೂ ಸಿಡಿ ಸಂತ್ರಸ್ತೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ.ಇದನ್ನು ನೋಡಿ ನನಗೆ ಆಶ್ಚರ್ಯ ಆಗಿದೆ. ನಾನು ಯಾವುದೇ ಹಣದ ವ್ಯವಹಾರ ಮಾಡಿಲ್ಲ. ನನಗೆ ದಿನನಿತ್ಯ ನೂರಾರು ಜನರು ಕರೆ ಮಾಡುತ್ತಾರೆನಾನು ಹಣ ವರ್ಗಾಯಿಸಿದ್ದಕ್ಕೆ ಸಾಕ್ಷಿ ಇದೆಯಾ? ಯುವತಿ ಕಾಲ್​ ಲಿಸ್ಟ್​ನಲ್ಲಿ ನನ್ನ ಹೆಸರು ಇರಬಹುದು. ಆದರೆ ನಾನು ಹಣ ನೀಡಿದ್ದೇನೆ ಅನ್ನುವುದು ಸುಳ್ಳು. ನೋಟಿಸ್​ ಬಂದ ಬಳಿಕ ನಾನು ಉತ್ತರ ಕೊಡುತ್ತೇನೆ. ನನ್ನದು ಏನಿದೆ ಎಂದು ನೋಟಿಸ್​ ಕೊಡುತ್ತಾರೆ. ನೋಟಿಸ್​ ಕೊಟ್ಟರೆ ನಾನು ವಿಚಾರಣೆಗೆ ಹೋಗುತ್ತೇನೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.

Share This Article
Leave a comment