ಫೇಸ್ಬುಕ್ ಲೈವ್ನಲ್ಲಿ ಕರ್ನಾಟಕ ಬಾರ್ ಕೌನ್ಸಿಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಸಿಡಿ ಪ್ರಕರಣ ಸಂತ್ರಸ್ತೆ ಯುವತಿ ಪರ ವಕೀಲ ಮಂಜುನಾಥ್ ಆರ್. ಅವರನ್ನು ಬಾರ್ ಕೌನ್ಸಿಲ್ ನಿಂದ ಅಮಾನತ್ತು ಮಾಡಲಾಗಿದೆ.
ವಕೀಲ ಮಂಜುನಾಥ್ ಆರ್. ಬಾರ್ ಕೌನ್ಸಿಲ್ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ 10 ದಿನಗಳಲ್ಲಿ ಉತ್ತರ ನೀಡಲು ಕರ್ನಾಟಕ ಬಾರ್ ಕೌನ್ಸಿಲ್ ಮಂಜುನಾಥ್ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಅವರನ್ನು ವಿಚಾರಣೆ ಮುಕ್ತಾಯದ ತನಕ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.
ದಾಖಲೆ ಪ್ರಕಾರ ಮಂಜುನಾಥ್ ಯುವತಿಗೆ ವಕಾಲತ್ತು ಸಹಿ ಹಾಕಿದ್ದ ವಕೀಲರಾಗಿದ್ದಾರೆ. ಇನ್ನೂ ಜಗದೀಶ್ ಇವರ ಅರ್ಜಿಯಲ್ಲಿ ತಾನೇ ಯುವತಿ ಪರ ವಕೀಲ ಅಂತಾ ಹೇಳಿದ್ದರು. ಫೇಸ್ಬುಕ್ ಲೈವ್ನಲ್ಲಿ ವಕೀಲ ಮಂಜುನಾಥ್ ಅವರು ಬಾರ್ ಕೌನ್ಸಿಲ್ನಲ್ಲಿ ಅನುದಾನಗಳ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದರು.
ಈ ಆರೋಪದಿಂದ ಕೌನ್ಸಿಲ್ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಅಲ್ಲದೇ ಫೇಕ್ ಸ್ಟಾಂಪ್ಸ್ ಬಗ್ಗೆಯೂ ಆರೋಪ ಮಾಡಿ ತೆಲಗಿ ಚಾಪಾ ಕಾಗದ ಪ್ರಕರಣಕ್ಕೆ ಹೋಲಿಕೆ ಮಾಡಿದ್ದಾರೆ. ಇದರಿಂದ ರಾಜ್ಯದ ಎಲ್ಲಾ ವಕೀಲರು ಕೌನ್ಸಿಲ್ಗೆ ಕರೆ ಮಾಡುತ್ತಿದ್ದಾರೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ