January 15, 2025

Newsnap Kannada

The World at your finger tips!

fire

ಬೆಳ್ಳೂರು ಬಳಿ ಅಗ್ನಿ ದುರಂತ ಮಗು ಸೇರಿ ಇಬ್ಬರ ಸಜೀವ ದಹನ

Spread the love

ಅಗ್ನಿ ದುರಂತವೊಂದರಲ್ಲಿ ಮಗು ಸೇರಿ ಇಬ್ಬರ ಸಜೀವ ದಹನವಾಗಿದ್ದಾರೆ.
ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಬೆಳ್ಳೂರು ಸಮೀಪದ ಅಗಚಹಳ್ಳಿ ಗ್ರಾಮದಲ್ಲಿ ಜರುಗಿದೆ.

ಭರತ್ ಎಂಬುವವರ 4 ವರ್ಷದ ಮಗು ಹಾಗೂ ಭರತ್ ಸ್ನೇಹಿತ ದೀಪಕ್ ಸಜೀವ ದಹನವಾಗಿದ್ದಾರೆ.

ಚಿಕ್ಕಮಗಳೂರಿನ ಕಳಸ ಮೂಲದ ಪೈಂಟರ್ ಭರತ್ ಗೆ ತೀವ್ರತರದ ಸುಟ್ಟ ಗಾಯ ಎ.ಸಿ.ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ಕೊಡಿಸಲಾಗುತ್ತಿದೆ.

ಇಬ್ಬರು ಸ್ನೇಹಿತರ ಜೊತೆ ಮನೆಯಲ್ಲೇ ಪಾನಗೋಷ್ಟಿ ಆಯೋಜಿಸಿದ್ದ ಭರತ್.
ರಾತ್ರಿ ಪೂರ ವಿಪರೀತ ಮಧ್ಯಪಾನ ಮಾಡಿದ್ದರು.ತಡರಾತ್ರಿ ಮನೆಗೆ ಬೀಗ ಜಡಿದು ವಾಪಸ್ಸಾಗಿದ್ದ ಮತ್ತೊಬ್ಬ ಸ್ನೇಹಿತ. ಈವೇಳೆ ಅಗ್ನಿ ದುರಂತ ಸಂಭವಿಸಿದೆ.

ಅಕ್ಕಪಕ್ಕದ ಮನೆಯವರು ಬೆಂಕಿ ದುರಂತ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತ್ನಿ ಜೊತೆ ಮನಸ್ತಾಪ ಹಿನ್ನೆಲೆ ಪತಿಯಿಂದ ದೂರಾಗಿ ಮಗು ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ

ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ, ಪರಿಶೀಲನೆ ಮಾಡಿದರು. ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.ಬೆಳ್ಳೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!