February 23, 2026

Newsnap Kannada

The World at your finger tips!

tipaturu

ತಿಪಟೂರಿನಲ್ಲಿ ಈಜಲು ಹೋಗಿ ಮೂವರು ಬಾಲಕರು‌ ಜಲಸಮಾಧಿ

Spread the love

ಬೇಸಿಗೆ ಸಮಯ, ಶಾಲೆಗೆ ರಜೆ ಕಾರಣದಿಂದಾಗಿ ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ಜಲ ಸಮಾಧಿಯಾದ ಘಟನೆ ತಿಪಟೂರು ಸಮೀಪ ಮಾರನಗೆರೆಯಲ್ಲಿ ನಡೆದಿದೆ.

ಈ ಘಟನೆಯಲ್ಲಿ ತರುಣ್ (11), ದೀಪಕ್​ (13), ಕೌಶಿಕ್ (13) ಜಲ ಸಮಾಧಿಯಾದವರು.

ಮೃತ ಬಾಲಕರು ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಇಂದು ಶಾಲೆಗೆ ರಜೆ ಇತ್ತು.‌ ಕಾರಣ 6 ಜನ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದರು. ಈ ವೇಳೆ ಒಬ್ಬ ಹುಡುಗ ನೀರಿನಲ್ಲಿ ಮುಳುಗುತ್ತಿರೋದನ್ನು ಕಂಡ ಉಳಿದಿಬ್ಬರು‌ ಬಾಲಕರು ಆತನನ್ನು ರಕ್ಷಿಸಲು ತೆರಳಿದ್ದಾರೆ.

ಆದರೆ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದ ಮಕ್ಕಳು ಹೋಗಿ ಮಕ್ಕಳ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ತಿಪಟೂರು ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.

error: Content is protected !!