ನಿಮ್ಮನ್ನು ನೋಡುವ ಆತುರದಲ್ಲಿ ಬಸ್ ನಿಂದ ನೆಗೆದು ಬಿದ್ದು ಹಲ್ಲು ಮುರಿದು ಕೊಂಡಿದ್ದೇನೆ. ನನಗೆ ನಮ್ಮ ಖರ್ಚಿನಲ್ಲಿ ಹಲ್ಲು ಕಟ್ಟಿಸಿಕೊಡಿ ಎಂದು
ಚನ್ನರಾಯಪಟ್ಟಣ ತಾಲೂಕಿನ ಕೊತ್ತನಘಟ್ಟ ಜೆಡಿಎಸ್ ಕಾರ್ಯಕರ್ತನೊಬ್ಬ ಶಾಸಕರಿಗೆ ಪತ್ರ ಬರೆದಿದ್ದಾರೆ.
ಚನ್ನರಾಯಪಟ್ಟಣ ಜೆಡಿಎಸ್ ಶಾಸಕ ಸಿ.ಎನ್ ಬಾಲಕೃಷ್ಣರಿಗೆ ಅಣ್ಣಪ್ಪ ಎಂಬುವವರು ಶಾಸಕರಿಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನನ್ನ ಪಕ್ಷಕ್ಕಾಗಿ ನಾನು ಪ್ರಾಣವನ್ನೂ ಕೊಡಲೂ ಸಿದ್ಧನಿದ್ದೇನೆ. ಶಾಸಕರೇ ಕೆಲ ವರ್ಷಗಳ ಹಿಂದೆ ನಾನು ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನೀವು ನಿಂತಿದ್ದಿರಿ. ನಿಮ್ಮನ್ನು ನೋಡುವ ಆತುರದಲ್ಲಿ ನಾನು ಚಲಿಸುತ್ತಿದ್ದ ಬಸ್ನಿಂದ ನೆಗೆದಿದ್ದೆ, ಇದು ನಿಮಗೆ ಗೊತ್ತಿರುವ ವಿಚಾರ. ಆ ವೇಳೆ ನನ್ನ ಹಲ್ಲುಗಳನ್ನು ಕಳೆದುಕೊಂಡಿದ್ದೆ. ಆದ್ದರಿಂದ ತಾವು ದಯಮಾಡಿ ನನಗೆ ಹಲ್ಲು ಕಟ್ಟಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
- ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ