January 15, 2025

Newsnap Kannada

The World at your finger tips!

kavitha c

ನಾಳೆ ಚಂದನ್ – ಕವಿತಾಗೌಡ ಎಂಗೇಜ್ಮೆಂಟ್

Spread the love

ಲಕ್ಷ್ಮಿಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಚಂದನ್ ಕುಮಾರ್, ಕವಿತಾ ಗೌಡ ಜೋಡಿ ನಿಜಜೀವನದಲ್ಲೂ ಒಂದಾಗುತ್ತಿದೆ. ಈ ಇಬ್ಬರೂ ಏಪ್ರಿಲ್ 1 ರಂದು ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.‌

ಈ ಕುರಿತಂತೆ ನಟ ಚಂದನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಇಬ್ಬರ ರೊಮ್ಯಾಂಟಿಕ್ ಚಿತ್ರದ ಜೊತೆಗೆ ‘ಏಪ್ರಿಲ್ 1 ರಂದು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಚಂದನ್ ಹಾಗೂ ಕವಿತಾ ಅವರುಗಳು ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರು ಬಹಳ ಆತ್ಮೀಯರಾಗಿದ್ದರು. ಟ್ರೆಕ್ಕಿಂಗ್, ಪ್ರವಾಸ, ಹೋಟೆಲ್‌ ಹೀಗೆ ಹಲವು ಕಡೆ ಸುತ್ತಾಡುತ್ತಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದರು.

ಚಂದನ್ ನಟನೆಯಿಂದ ಸ್ವಲ್ಪ ದೂರ ಸರಿದಿದ್ದು ಬಿರಿಯಾನಿ ಮಾರಾಟದ ಉದ್ಯಮ ಆರಂಭಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!