February 23, 2026

Newsnap Kannada

The World at your finger tips!

girl 1 1

ಸಿಡಿ ಲೇಡಿಗೆ ಎಸ್ ಐಟಿ ಯಿಂದ ಪ್ರಶ್ನೆಗಳ ಸುರಿಮಳೆ : ಅತ್ಯಾಚಾರ ಎಂತಾದರೆ ವಿಡಿಯೋ ಮಾಡಿದ್ದು ಯಾರು ?

Spread the love

ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾರು ಮತ್ತು ಯಾಕೆ ? ಎಂಬ ಪ್ರಶ್ನೆಯೂ ಸೇರಿ ನೂರಕ್ಕೂ ಹೆಚ್ಚು ಎಸ್ ಐಟಿ ಕೇಳುವ ಪ್ರಶ್ನೆಗೆ ಸಂತ್ರಸ್ತ ಯುವತಿ ಉತ್ತರ ಪಡೆಯುವ ಕಾರ್ಯ ಆರಂಭವಾಗಿದೆ.

ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ವಿಂಗ್​ನಲ್ಲಿರುವ ಸಿಡಿ ಲೇಡಿಗೆ ಅಧಿಕಾರಿಗಳು ಕೇಸ್ ಸಂಬಂಧ ಮೌಖಿಕವಾಗಿ ಬೇಸಿಕ್ ಪ್ರಶ್ನೆಗಳನ್ನು ರೆಡಿಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.

ಪ್ರಮುಖ ಪ್ರಶ್ನೆ ಗಳು :

ಈ ಘಟನೆ ನಡೆದಿದ್ದು ಯಾವಾಗ?
ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾರು ಮತ್ತು ಯಾಕೆ?/ ವಿಡಿಯೋದಲ್ಲಿದ್ದ ಯುವತಿ ನಾನಲ್ಲ ಎನ್ನಲು ಕಾರಣವೇನು? ಪೋಷಕರ ಬಳಿ‌ ಮೊದಲು ನಾನಲ್ಲ ಎನ್ನಲು ಕಾರಣವೇನು? ದ್ವಂದ್ವ ಹೇಳಿಕೆಗಳ ಹಿಂದೆ ಯಾವುದಾದರೂ ಒತ್ತಡವಿತ್ತಾ? ಬೆದರಿಕೆ ಇದೆ ಎಂದಿದ್ದೀರಿ, ಯಾರಿಂದ ಬೆದರಿಕೆ ಇದೆ? ಪ್ರಕರಣದಲ್ಲಿ ಇತರೇ ಶಂಕಿತ ಆರೋಪಿಗಳ ಪಾತ್ರವೇನು? ಎಂಬ ನೂರು ಪ್ರಶ್ನೆಗಳಿಗೆ ಎಸ್‌ಐಟಿ ತಂಡ ಉತ್ತರ ಪಡೆದುಕೊಳ್ಳಲಿದೆ.

ಆಡುಗೋಡಿಯ ಟೆಕ್ನಿಕಲ್ ವಿಂಗ್​ನಲ್ಲಿ CD ಲೇಡಿ ವಿಚಾರಣೆ ನಡೆಯುತ್ತಿದೆ. ಎಸ್​ಐಟಿ ಅಧಿಕಾರಿಗಳ ತಂಡದಿಂದ CD ಲೇಡಿ ವಿಚಾರಣೆ ನಡೆಯುತ್ತಿದೆ. ಈ ನಡುವೆ, ಆಡುಗೋಡಿಯ ಟೆಕ್ನಿಕಲ್ ವಿಂಗ್​ ಸುತ್ತಮುತ್ತ ಹೈಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ. ಟೆಕ್ನಿಕಲ್ ವಿಂಗ್ ಬಳಿ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.

ಎಸ್ಐಟಿ ವಶಕ್ಕೆ ನೀಡಿಲ್ಲ : ವಕೀಲರು

ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ಯುವತಿಯ ಧ್ವನಿ ಪರೀಕ್ಷೆ ಮತ್ತು ಸಿಆರ್​ಪಿಸಿ161 ಅಡಿ ಹೇಳಿಕೆ ಪಡೆಯಲಾಗುತ್ತದೆ ಎಂದು ಸಂತ್ರಸ್ತೆಯ ಪರ ವಕೀಲರಾದ ಜಗದೀಶ್ ಹೇಳಿಕೆ ನೀಡಿದ್ದಾರೆ. ನಾಳೆ ವೈದ್ಯಕೀಯ ಪರೀಕ್ಷೆಗಳು, ಸಾಕ್ಷಿ ಸಂಗ್ರಹದ ಪ್ರಕ್ರಿಯೆಗಳು ನಡೆಯಲಿವೆ. ಅವರನ್ನು ಎಸ್​ಐಟಿ ವಶಕ್ಕೆ ನೀಡಲಾಗಿಲ್ಲ.. ನಮಗೆ ಮನವಿ ಮಾಡಿ ಕರೆತಂದಿದ್ದಾರೆ ಎಂದು ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

error: Content is protected !!