February 22, 2026

Newsnap Kannada

The World at your finger tips!

bagla

ನಿಂತಿದ್ದ ಲಾರಿಗೆ ಕಾರು ಢಿಕ್ಕಿ : ಹುಟ್ಟು ಹಬ್ಬ ಮುಗಿಸಿಕೊಂಡು ಬಂದ ನಾಲ್ವರ ಧಾರುಣ ಸಾವು

Spread the love

ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾದ ಪರಿಣಾಮ ಹುಟ್ಬು ಹಬ್ಬದ ಆಚರಣೆಗೆ ಹೋಗಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಹುನಗುಂದ ತಾಲ್ಲೂಕಿನ ಬೇವಿನಮಟ್ಟಿ ಗ್ರಾಮದ ಬಳಿ ಕಳೆದ ರಾತ್ರಿ ಜರುಗಿದೆ.

ವೇಗವಾಗಿ ಬಂದ ಕಾರು ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯಲ್ಲಿ ಚಂದ್ರಶೇಖರ ಬುಟ್ಟಾ(22), ನವೀನ್ ಸಾಕಾ( 20), ಚೆನ್ನಬಸವ ಅಂಜಿ(22) ಹಾಗೂ ಬಸವರಾಜ ಭಂಡಾರಿ (33) ಮೃತರು.

ಸಾವನ್ನಪ್ಪಿದವರು ಇಳಕಲ್ ಮೂಲದವರು ಎಂದು ಗೊತ್ತಾಗಿದೆ. ನಾಲ್ವರೂ ಇಳಕಲ್​​ನಿಂದ ಗುಳೇದಗುಡ್ಡಕ್ಕೆ ಬರ್ತ್​​ಡೇ ಆಚರಣೆಗೆ ಹೋಗಿದರು. ವಾಪಸ್ ಹುನಗುಂದ ಮಾರ್ಗವಾಗಿ ಇಳಕಲ್​​ಗೆ ಬರುವಾಗ ದುರ್ಘಟನೆ ನಡೆದಿದೆ.

ಘಟನೆ ನಡೆದ ಕೂಡಲೇ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಹುನಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನೀಡುತ್ತಿದ್ದಾರೆ.

error: Content is protected !!