ರೈತರಿಗೆ ಸಹಾಯ ಐದು ದಿನದಲ್ಲಿ ತಲುಪದಿದ್ದರೆ ಸಸ್ಪೆಂಡ್ ಗ್ಯಾರೆಂಟಿ- ಸಚಿವ ನಾರಾಯಣ ಗೌಡ

Team Newsnap
1 Min Read
Narayan gowda congress opposition report to high command ನಾರಾಯಣಗೌಡ ಕಾಂಗ್ರೆಸ್‌ ಸೇರ್ಪಡೆ ವಿರೋಧ : ಹೈ ಕಮಾಂಡ್‌ಗೆ ವರದಿ - ಕೆ. ಬಿ. ಸಿ

ನ್ಯೂಸ್ ಸ್ನ್ಯಾಪ್.
ಕೋಲಾರ.

ವಾರದೊಳಗೆ ರೇಷ್ಮೆ ಬೆಳೆಗಾರರ ಖಾತೆಗೆ ಬೆಂಬಲ ಬೆಲೆ ಹಣ ಜಮಾ ಆಗಬೇಕು. ಇಲ್ಲದಿದ್ದಲ್ಲಿ ಅಮಾನತ್ತು ಮಾಡುತ್ತೇನೆ‌ ಎಂದು ಕೋಲಾರ ರೇಷ್ಮೆ ಇಲಾಖೆ ಡಿಡಿ ಆಂಜನೇಯ ಗೌಡರಿಗೆ ಸಚಿವ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ‌.

ಸಚಿವರು ಶ್ರೀನಿವಾಸಪುರದಲ್ಲಿರುವ ಜಿ. ನಾರಾಯಣಗೌಡ ತೋಟಗಾರಿಕೆ ಕ್ಷೇತ್ರದ ಮಾವು ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಈ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು ಮ್ಯಾಂಗೊಬೋರ್ಡ್ ಇದ್ದೂ ಇಲ್ಲದಂತಿದೆ. ರೈತರಿಗೆ ಸರಿಯಾದ ಅನುಕೂಲ ಆಗುತ್ತಿಲ್ಲ. ಸರ್ಕಾರದಿಂದ ಹಣ ನೀಡಲು ಸಿದ್ದ, ಆದರೆ ರೈತರಿಗೆ ಅದು ಸಹಾಯವಾಗುವಂತಿರಬೇಕು. ಹೀಗಾಗಿ ಅಧಿವೇಶನ ಮುಗಿದ ತಕ್ಷಣ ಮೀಟಿಂಗ್ ನಡೆಸಿ ಬೋರ್ಡ್ ಉನ್ನತೀಕರಣ ಮಾಡುತ್ತೇವೆ ಎಂದು ಸಚಿವರು ಹೇಳಿದರು.
ಲಾಕ್ ಡೌನ್ ಸಂದರ್ಭದಲ್ಲಿ ಹಣ್ಣು, ತರಕಾರಿ, ಹೂವು ಮಾರಾಟವಾಗದೆ ನಷ್ಟವಾಗಿತ್ತು. ಆಗ ಸರ್ಕಾರ ಪರಿಹಾರ ನೀಡಿದೆ. ಕೆಲವು ಕಡೆ ತಾಂತ್ರಿಕ ಕಾರಣದಿಂದ ರೈತರ ಖಾತೆಗ ಹಣ ಜಮ ಆಗಿಲ್ಲ. ಅಧಿಕಾರಿಗಳು ಎಲ್ಲ ಸಮಸ್ಯೆ ಸರಿಪಡಿಸಬೇಕು. ವಾರದೊಳಗೆ ಪರಿಹಾರ ಹಣ ಸಂದಾಯ ಆಗಬೇಕು ಎಂದು ಸೂಚನೆ ನೀಡಿದರು.

ಇದೆ ವೇಳೆ ರೇಷ್ಮೆ ಬೆಳೆಗಾರರಿಗೆ ನೀಡಿರುವ ಬೆಂಬಲ ಬೆಲೆ ರೈತರಿಗೆ ಈ ವರೆಗು ತಲುಪಿಲ್ಲ ಎಂಬ ಕಾರಣಕ್ಕೆ ರೇಷ್ಮೆ ಇಲಾಖೆ ಡಿಡಿ ಅಂಜನೆಯಗೌಡ ಅವರನ್ನ ತರಾಟೆ ತೆಗೆದುಕೊಂಡ ಸಚಿವರು, ಐದು ದಿನದೊಳಗೆ ರೈತರ ಖಾತೆಗೆ ಹಣ ಹೋಗಬೇಕು‌. ಬೇರೆ ಎಲ್ಲ ಕಡೆ ಹಣ ಸಂದಾಯ ಆಗಿದೆ‌. ರೈತರು ಅಭಿನಂದನೆ ಕೂಡ ಸಲ್ಲಿಸಿದ್ದಾರೆ‌. ಆದ್ರೆ ಕೋಲಾರದಲ್ಲಿ ಮಾತ್ರ ಯಾಕೆ ವಿಳಂಬ ಆಗಿದೆ. ತಕ್ಷಣ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮ್ಯಾಂಗೊ ಬೋರ್ಡ್ ಗೆ 25 ಕೋಟಿ ರೂ. ವಾರ್ಷಿಕ ಅನುದಾನ ನೀಡುವ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ ಸಚಿವರು, ಡ್ರಿಪ್ ಇರಿಗೇಷನ್ ಗೆ ಶೇ. ನೂರರಷ್ಟು ಸಬ್ಸಿಡಿ ನೀಡಿವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ , ವಿಧಾನ ಪರಷತ್ ಸದಸ್ಯ ನಾರಾಯಣಸ್ವಾಮಿ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment