ಆ ಯುವತಿ ದೂರು ನೀಡುವ ಕೊನೆಯ ಅಸ್ತ್ರ ಬರುತ್ತೆ ಎಂದು ನನಗೆ ಮೊದಲೇ ಗೊತ್ತಿತ್ತು. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಆಕೆ ತನ್ನ ವಕೀಲರ ಮೂಲಕ ದೂರು ಸಲ್ಲಿಕೆ ಮಾಡಿದ ಕುರಿತಂತೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಯುವತಿ ದೂರು ನೀಡುತ್ತಾಳೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ದುಡ್ಡು ತಗೊಂಡು ದೇಹ ತೋರಿಸಿದ್ದಾಳೆ. ಇಂತಹ ಯುವತಿಯರ ಬಗ್ಗೆ ನನಗೆ ಗೊತ್ತಿದೆ. ಯುವತಿಯ ಮನೆಯಲ್ಲಿ 10 ಲಕ್ಷ, ಆರೋಪಿ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಎಲ್ಲವೂ ಸಿಕ್ಕಿದೆ ಎಂದರು.
ಇದು ಅವರಿಗೆ ಕೊನೆ ಅಸ್ತ್ರವಾಗಿದೆ. ನಾಳೆ ನಮ್ಮ ಅಸ್ತ್ರ ಪ್ರಯೋಗ ಆಗಲಿದೆ. ಇಂತಹ ಹತ್ತು ಪ್ರಕರಣ ಬಂದರೂ ನಾನು ಎದರಿಸುತ್ತೇನೆ. ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ನಾನು ತಪ್ಪು ಮಾಡಿದ್ರೆ ನಾನೇ ಜೈಲಿಗೆ ಹೋಗುತ್ತೇನೆ. ಪೊಲೀಸ್ ಆಯುಕ್ತರಿಗೆ ಮನವಿ ಮಾಡುತ್ತೇನೆ. ತಪ್ಪಿದ್ದರೇ ಪೊಲೀಸ್ ಸ್ಟೇಷನ್ ಬರುತ್ತೇನೆ. ನನ್ನ ತಪ್ಪಿದ್ದರೇ ನಾನೇ ನೇಣು ಹಾಕಿಕೊಳುತ್ತೇನೆ ಎಂದು ಸವಾಲು ಎಸೆದರು.
ಮಹಾನಾಯಕ ಯಾರು ಎಂಬುವುದು ಶೀಘ್ರವೇ ಎಲ್ಲವೂ ಗೊತ್ತಾಗಲಿದೆ. ನಾಳೆ ಇಂದ ನಮ್ಮ ಆಟ ಶುರುವಾಗುತ್ತದೆ. ಮೊದಲು ನಾವು ದೂರು ನೀಡಿದ್ದು, ನಮ್ಮ ದೂರಿನ ಬಗ್ಗೆ ತನಿಖೆ ಆಗಬೇಕು. ನನ್ನ ಜೀವನದ ಉದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಪದೇ ಪದೇ ಹೇಳುತ್ತಿದ್ದೇನೆ ನಾನು ನಿರಾಪರಾಧಿ, ನಾನು ಸದಾಶಿವನಗರದಲ್ಲೇ ಇರುತ್ತೇನೆ ಎಂದು ವಿಶ್ವಾಸದಿಂದ ನುಡಿದರು.
More Stories
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ (ಐಕ್ಯಾಟ್) ಸ್ಥಾಪನೆ ಖಚಿತ
ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಂಧನ: 48 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ
ಗಾಜಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಅಸ್ತು: ಭಾನುವಾರದಿಂದ ಜಾರಿಗೆ