ಸಿದ್ದು, ಡಿಕೆಶಿ, ಹೆಚ್ ಡಿಕೆ ಇವರೆಲ್ಲ ಏಕಪತ್ನಿ ವ್ರತಸ್ಥರೇ? ತನಿಖೆಯಾಗಲಿ ಎಂಬ ಒತ್ತಾಯ ಸಚಿವರದ್ದು
ರಾಜ್ಯದ 224 ಶಾಸಕರ ಏಕಪತ್ನಿ ವ್ರತದ ಬಗ್ಗೆ ತನಿಖೆ ಮಾಡಿ ಎಂದು ಸಚಿವ ಸುಧಾಕರ ಬಹಿರಂಗ ಸವಾಲು ಹಾಕಿದ್ದಾರೆ.
ತೀವ್ರ ಸದ್ದು ಮಾಡುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರಿಗೆ ಈ ಛಾಲೆಂಜ ಮಾಡಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ, ರಮೇಶ್ ಕುಮಾರ್ ಸೇರಿದಂತೆ ಎಲ್ಲರ ವಿರುದ್ಧ ತನಿಖೆಯಾಗಲಿ, ಯಾರ ಬಂಡವಾಳ ಏನೆಂಬುದು ರಾಜ್ಯದ ಜನತೆಗೆ ತಿಳಿಯಲಿ ಎಂದರು.
ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿದ ಸಚಿವ ಸುಧಾಕರ್, ಸಿಡಿ ವಿಚಾರವಾಗಿ ಶ್ರೀರಾಮಚಂದ್ರನಂತೆ, ಸತ್ಯಹರಿಶ್ಚಂದ್ರರಂತೆ ಇಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಯಾರೆಲ್ಲ ಮಾತನಾಡುತ್ತಿದ್ದಾರೆ ಅವರೆಲ್ಲರಿಗೂ ಓಪನ್ ಚಾಲೇಂಜ್ ಮಾಡುತ್ತೇನೆ. ಅವರುಗಳು ಇದಕ್ಕೆ ಒಪ್ಪಿಕೊಳ್ಳುತ್ತಾರೆಯೇ? ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ,ಡಿಕೆಶಿ, ಕುಮಾರಣ್ಣ, ರಮೇಶ್ ಕುಮಾರ್ ಇವರೆಲ್ಲ ಇವರೆಲ್ಲರೂ ಸತ್ಯ ಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತವನ್ನು ಮಾಡುತ್ತಿದ್ದಾರಾ? ಇವರೆಲ್ಲ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರ ವಿರುದ್ಧ ಮಾತ್ರವಲ್ಲ ನನ್ನನ್ನೂ ಸೇರಿದಂತೆ ಎಲ್ಲಾ 224 ಶಾಸಕರ ವಿರುದ್ಧವೂ ತನಿಖೆಯಾಗಲಿ ಎಂದು ಹೇಳಿದರು
ಸಿಎಂ ಆಗಿದ್ದಾಗ ಯಾರು ಏನೇನು ಮಾಡಿದರು ? ಯಾರಿಗೆಲ್ಲ ಅನೈತಿಕ ಸಂಬಂಧಗಳಿವೆ? ಯಾರ ವಿಚಾರ ಏನು ಎಂಬುದು ತನಿಖೆಯಾಗಲಿ. ತನಿಖೆ ಬಳಿಕ ಯಾರ ಬಂಡವಾಳ ಏನು ಎಂಬುದು ಗೊತ್ತಾಗಲಿದೆ ಎಂದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ