January 6, 2025

Newsnap Kannada

The World at your finger tips!

topegowda

ನಿವೃತ್ತ ವಾರ್ತಾಧಿಕಾರಿ ತೋಪೇಗೌಡ ಹೃದಯಾಘಾತದಿಂದ ನಿಧನ

Spread the love

ನಿವೃತ್ತ ವಾರ್ತಾಧಿಕಾರಿ ಕೆ.ಆರ್.ತೋಪೇಗೌಡ (72) ಹೃದಯಾಘಾತದಿಂದ ಹಾಸನದ ಸ್ವಗೃಹದಲ್ಲಿ ನಿಧನರಾದರು.

ಕಳೆದ 25 ವರ್ಷಗಳ ಕಾಲ ಹಾಸನ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ‌ಸೇವೆ ಸಲ್ಲಿಸಿದ್ದಾರೆ.
22 ವರ್ಷಗಳ ಕಾಲ ಜಿಲ್ಲಾ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2006ರಲ್ಲಿ ನಿವೃತ್ತಿ ಹೊಂದಿದ್ದರು.

ತೋಪೇಗೌಡರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಡ್ಲೂರು ಗ್ರಾಮದವರು. ಮೃತರು, ಪತ್ನಿ ಮೂವರು ಪುತ್ರಿಯರು,
ಅಳಿಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಹಾಸನದಲ್ಲಿ ನಡೆಯಲಿದೆ.

ಕೆಯುಡಬ್ಲ್ಯೂಜೆ ಸಂತಾಪ:

ವಾರ್ತಾಧಿಕಾರಿಯಾಗಿ ಸುಧೀರ್ಘ ಅವಧಿಗೆ ಕೆಲಸ ಮಾಡಿದ್ದ ತೋಪೇಗೌಡ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಪತ್ರಕರ್ತರು, ಮಾಧ್ಯಮ ಸ್ನೇಹಿಯಾಗಿ ನಡೆದುಕೊಂಡಿದ್ದ, ಸದಾ ಮಾನವೀಯತೆ ಸೇವಾ ಮನೋಭಾವದ ಅಧಿಕಾರಿಯಾಗಿದ್ದ ತೋಪೇಗೌಡ ಅವರ ನಿಧನದಿಂದ ಅಪರೂಪದ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಕೆಯುಡಬ್ಲ್ಯೂಜೆ ಶೋಕಿಸಿದೆ.

Copyright © All rights reserved Newsnap | Newsever by AF themes.
error: Content is protected !!