ಆತ್ಮಹತ್ಯೆ ದಾರಿ ಕಂಡುಕೊಳ್ಳಲು ಗೂಗಲ್ ಸರ್ಚ್ ಮಾಡಿದ ಯುವಕ ನೊಬ್ಬ ನೈಟ್ರೋಜನ್ ಸಿಲಿಂಡರ್ ಪೈಪ್ ಅನ್ನು ಮೂಗಿಗೆ ತೂರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಬೆಂಗಳೂರಿನ ಮಹದೇಹಪುರದಲ್ಲಿ ನಡೆದಿದೆ. ಬೀದರ್ ಮೂಲದ ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದ ಯುವಕ.
ಜೀವನ್ ಅಂಬಾಟೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಗರುಡಾಚಾರಪಾಳ್ಯದ ಲಕ್ಷ್ಮೀಸಾಗರ ಬಡಾವಣೆಯಲ್ಲಿ ವಾಸವಾಗಿದ್ದ ಈತ ಜೀವನದ ಬಗ್ಗೆ ಬಹಳ ಮಹತ್ವಾಕಾಂಕ್ಷೆ ಹೊಂದಿದ್ದನು.
ನಗರದಲ್ಲಿ ಕೆಲಸಕ್ಕೆ ಸೇರಿದ ಬಳಿಕ ಆತನ ಜೀವನ ಶೈಲಿಯೇ ಬದಲಾಗಿತ್ತು. ಇದರಿಂದಾಗಿ ಕೆಲ ದಿನಗಳಿಂದ ಜಿಗುಪ್ಸೆಗೂ ಒಳಗಾಗ ಜೀವನ್ ಬದುಕಿನ ಪಯಣ ಮುಗಿಸೋ ಸಲುವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದ. ಅದಕ್ಕಾಗಿ ಗೂಗಲ್ ನಲ್ಲಿ ಕೆಲವು ಮಾರ್ಗಗಳನ್ನು ಹುಡುಕಿದ್ದ ಎಂದು ಮಹದೇವಪುರ ಪೊಲೀಸ್ ಮೂಲಗಳು ತಿಳಿಸಿವೆ.
ಆನ್ ಲೈನ್ ನಲ್ಲಿ ಸಿಕ್ಕ ಮಾಹಿತಿಯಂತೆ ಜೀವನ್ ಬಲೂನ್ ಗಳಿಗೆ ತುಂಬಿಸುವ ನೈಟ್ರೋಜನ್ ಸಿಲಿಂಡರ್ ತಂದಿದ್ದಾನೆ. ಬಳಿಕ ಸಿಲಿಂಡರ್ ಪೈಪ್ ಮೂಗಿಗೆ ಇಟ್ಕೊಂಡು ಕನೆಕ್ಟ್ ಮಾಡಿದ್ದ ಯುವಕ ಮುಖವನ್ನು ಕವರ್ ಪ್ಯಾಕ್ ಮಾಡ್ಕೊಂಡು ಗ್ಯಾಸ್ ಸಿಲಿಂಡರ್ ಆನ್ ಮಾಡಿಕೊಂಡು ಉಸಿರು ಕಟ್ಟಿ ಸಾವನ್ನಪ್ಪಿದ್ದಾನೆ.
4 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಈತ ಮದುವೆ ಆಗಿಲ್ಲ. ಸಾವಿಗೆ ಯಾರೂ ಕಾರಣರಲ್ಲ ಎಂದಿದ್ದಾನೆ. ಮಹದೇವಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
More Stories
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ