February 21, 2026

Newsnap Kannada

The World at your finger tips!

m d2

ಮೈಸೂರಿನ ಲ್ಲಿ ಮನೆ ಸದಸ್ಯರನ್ನು ಕಟ್ಟಿ ಹಾಕಿ ದರೋಡೆ: ಸಾರ್ವಜನಿಕರ ನೆರವಿನೊಂದಿಗೆ ನಾಲ್ವರ ಬಂಧನ

Spread the love

ಬೆಲ್ ಮಾಡಿ ಮನೆಯೊಳಗೆ ‌ನುಗ್ಗಿದ ಆರು ಜನರ ದರೋಡೆಕೋರ ತಂಡವೊಂದು ಮನೆಯ ಸದಸ್ಯರನ್ನು ಕಟ್ಟಿ ಹಾಕಿ, ಚಿನ್ನಾಭರಣ, ನಗದು ದೋಚುವ ಯತ್ನ ವಿಫಲವಾದ ಘಟನೆ ಮೈಸೂರಿನ ಸರಸ್ವತಿ ಪುರಂನಲ್ಲಿ ಕಳೆದ ರಾತ್ರಿ ಜರುಗಿದೆ.

ಸರಸ್ವತಿಪುರಂ‌ ನಿವಾಸಿ ಡಾಕ್ಟರ್ ದತ್ತಾತ್ರೇಯರ ಮನೆಯಲ್ಲಿ ಕಳೆದ ರಾತ್ರಿ 8 ಗಂಟೆಗೆ ಜರುಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ನಾಲ್ವರು ದರೋಡೆಕೋರರನ್ನು ಬಂಧಿಸಲಾಗಿದೆ. ಇಬ್ಬರು ಪರಾರಿಯಾಗಿದ್ದಾರೆ.

m d

ಸುಮಾರು ರಾತ್ರಿ ೮ ಗಂಟೆ ಸಮಯದಲ್ಲಿ ವೈದ್ಯರ ಮನೆಗೆ ಬಂದ ತಂಡ ಮನೆಯ ಬೆಲ್ ಮಾಡಿದೆ. ಬಾಗಿಲು ತೆರೆದ ತಕ್ಷಣ ಬಲವಂತವಾಗಿ ಮನೆಗೆ ನುಗ್ಗಿದೆ. ನಂತರ ಮನೆಯವರನ್ನು ಕಟ್ಟಿ ಹಾಕಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುವ ವೇಳೆಗೆ ಸಾರ್ವಜನಿಕರ ನೆರವಿನೊಂದಿಗೆ 4 ಮಂದಿ ದರೋಡೆ ಕೋರರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ.

ಸರಸ್ವತಿ ಪುರಂ ಪೋಲಿಸರು ತಪ್ಪಿಸಿಕೊಂಡ ಇಬ್ಬರ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

ದರೋಡೆ ಮಾಡಿದ್ದ ಎಲ್ಲಾ ಚಿನ್ನಾಭರಣ, ನಗದು ಸಿಕ್ಕಿವೆ. ಆದರೆ ಅಜ್ಜಿಯೊಬ್ಬರ ಸರ, ಬಳೆ ಹಾಗೂ ಐ ಫೋನ್ ಗಳನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ.

error: Content is protected !!