ಮಂಡ್ಯದ ಬೆಲ್ಲ ತಯಾರಕರು ತುಂಬಾ ಕಷ್ಟದಲ್ಲಿ ಇದ್ದಾರೆ. ಕೇಂದ್ರದ ಆತ್ಮ ನಿರ್ಭರ ಯೋಜನೆಯಲ್ಲಿ ಆರ್ಥಿಕ ನೆರವು ನೀಡಿ ಸಂಕಷ್ಟ ದಿಂದ ಪಾರು ಮಾಡುವಂತೆ ಸಂಸದೆ ಸುಮಲತಾ ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದರು.
ಸಂಸದೆ ಸುಮಲತಾ ತಮಗೆ ಸಿಕ್ಕ 2 ನಿಮಿಷ ಅವಧಿಯಲ್ಲಿ ಮಂಡ್ಯದ ಬೆಲ್ಲ ತಯಾರಕರ ಸಮಸ್ಯೆಗಳನ್ನು ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಆತ್ಮ ನಿರ್ಭರ ಯೋಜನೆಯಲ್ಲಿ
ಒಂದು ಜಿಲ್ಲೆ ಒಂದು ಉತ್ಪನ್ನದ ಮೂಲಕ ಆಯ್ಕೆಯಾದ ಮಂಡ್ಯದ ಫೇಮಸ್ ಬೆಲ್ಲಕ್ಕೆ ಭಾರಿ ಬೇಡಿಕೆ ಇದೆ. ಆದರೆ ಉತ್ಪಾದಕರಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ, ಆರ್ಥಿಕ ನೆರವು ಸಿಗದೇ ಸಂಕಷ್ಟ ಅನುಭವಿಸುವಂತಾ ಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ 6000 ಬೆಲ್ಲ ಉತ್ಪಾದಕರು ಇದ್ದರು. ಅದರೆ ಈಗ ಕೇವಲ 600 ಮಂದಿ ಉತ್ಪಾದಕರು ಇದ್ದಾರೆ. ಈ ಪ್ರಮಾಣದ ಕುಸಿತಕ್ಕೆ ಸರಿಯಾದ ರೀತಿಯ ಪ್ರೋತ್ಸಾಹ ಸಿಗುತ್ತಿಲ್ಲ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಉತ್ಪಾದಕರ ನೆರವಿಗೆ ಧಾವಿಸುವಂತೆ ಕೋರಿದರು.
ಮಂಡ್ಯದ ಬೆಲ್ಲಕ್ಕೆ ಈಗಿನ ದಿನಗಳಲ್ಲಿ ಬೇಡಿಕೆ ಕಡಮೆಯಾಗುತ್ತಿದೆ. ಕಾರಣ ಗ್ರಾಹಕರನ್ನು ಆಕರ್ಷಿಸಲು ಕೆಲವು ಉತ್ಪಾದಕರು ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಕಲಬೆರೆಕೆ ಮಾಡಿ ಅಕ್ರಮ ತಯಾರಿಕೆ ಮಾಡುತ್ತಿದ್ದಾರೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ ಸಾವಯವ ಬೆಲ್ಲ ತಯಾರಿಕೆ ಹೆಚ್ಚಿನ ಗಮನ ಹರಿಸುವ ಅನಿವಾರ್ಯತೆಯೂ ಇದೆ ಎಂದರು.
ನಾನು ಹೇಳುವ ಈ ಎಲ್ಸಾ ಸಂಗತಿಗಳು ತುಂಬಾ ಗಂಭೀರವಾಗಿವೆ. ಕೇಂದ್ರ ಸರ್ಕಾರ ಗುಣ ಮಟ್ಟದ ಬೆಲ್ಲ ತಯಾರಿಸಲು ಎಲ್ಲಾ ರೀತಿಯ ನೆರವು ಹಾಗೂ ಆರ್ಥಿಕ ಶಕ್ತಿ ತುಂಬುವಂತೆ ಸುಮಲತಾ ಮನವಿ ಮಾಡಿದರು.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ