ಜುಲೈ 15 ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಚಿಂತನೆ – ಸುರೇಶ್ ಕುಮಾರ್

Team Newsnap
1 Min Read

ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದೆ. ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ತುಮಕೂರಿನಲ್ಲಿ ಹೇಳಿದರು.

ತುಮಕೂರಿನ‌ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸೋಂಕಿನ ಭೀತಿಯ ನಡುವೆಯೂ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವುದಕ್ಕೆ ತುರ್ತು ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದರು.

ಮಾರ್ಚ್ 1ನೇ ತಾರೀಖಿನಿಂದ 1-5ನೇ ತರಗತಿ ಆರಂಭಿಸುವ ಇಚ್ಛೆ ಇತ್ತು. ಆದರೆ ಚರ್ಚೆ ಮಾಡಿ, ಬೇಡ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ‌ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಶಾಲೆ ಆರಂಭವಾಗದ ಕಾರಣದಿಂದ ಮಕ್ಕಳು ಗಣಿತವನ್ನೇ ಮರೆತಿದ್ದಾರೆ. ಪಠ್ಯ ವಿಷಯ ಸೇರಿದಂತೆ ಭಾಷೆ ಮರೆತಿದ್ದಾರೆ. ಇದರ ಬಗ್ಗೆ ಅಜೀಂ ಪ್ರೇಮ್ ಜಿ ವಿವಿ ನೀಡಿರುವ ವರದಿ ಆಘಾತಕಾರಿಯಾಗಿದೆ. ಹೀಗಾಗಿ ಜುಲೈ 15 ರಿಂದ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದರು.

Share This Article
Leave a comment