February 21, 2026

Newsnap Kannada

The World at your finger tips!

cd

ಸಿ ಡಿ ಯುವತಿ ವಾಸವಿದ್ದ ಮನೆ ಎಸ್ ಐಟಿ ದಾಳಿ – ಲಕ್ಷಾಂತರ ರು.ವಶ

Spread the love

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್​ ವಿಡಿಯೋದಲ್ಲಿದ್ದ ಯುವತಿಯ ಮನೆಗೆ ನಿನ್ನೆ ಎಸ್​ಐಟಿ ತಂಡ ಏಕಾಏಕಿ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

ಈ ವೇಳೆ ಆ ಯುವತಿಯ ಮನೆಯಲ್ಲಿ ಲಕ್ಷಾಂತರ ರೂ. ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಆ ಯುವತಿ ವಾಸವಾಗಿದ್ದ ಬೆಂಗಳೂರಿನ ಆರ್​ಟಿ ನಗರದಲ್ಲಿರುವ ಮನೆಯಲ್ಲಿ ನಿನ್ನೆ ರಾತ್ರಿ 10 ಗಂಟೆಯವರೆಗೂ ಎಸ್​ಐಟಿ ತಂಡ ಪರಿಶೀಲನೆ ನಡೆಸಿತ್ತು.

ಈ ವೇಳೆ ಆಕೆಯ ಮನೆಯಲ್ಲಿ 9.2 ಲಕ್ಷ ರೂ. ಹಣ ಪತ್ತೆಯಾಗಿದೆ. ಆ ಹಣವನ್ನು ವಶಕ್ಕೆ ಪಡೆದು, ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಎಸಿಪಿ ಧರ್ಮೇಂದ್ರ ನೇತೃತ್ವದ ಎಸ್​ಐಟಿ ತಂಡದಿಂದ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಸಿಡಿಯಲ್ಲಿರುವ ಯುವತಿಯನ್ನು ಯಾರಾದರೂ ಇತ್ತೀಚಿಗೆ ಮತ್ತೆ ಸಂಪರ್ಕಿಸಿದ್ದರಾ? ಆಕೆ ಇಲ್ಲಿದ್ದ ಸಂದರ್ಭದಲ್ಲಿ ಬೇರೆ ಯಾರಾದರೂ ಇಲ್ಲಿ ಭೇಟಿ ನೀಡುತ್ತಿದ್ದರಾ? ಎಂಬ ಬಗ್ಗೆ ಕಟ್ಟಡದ ಮಾಲೀಕರ ಬಳಿ ಪ್ರಶ್ನೆ ಮಾಡಲಾಗಿದೆ

ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಯುವತಿಯ ಮನೆ ಪರಿಶೀಲಿಸಿದ ಎಸ್ ಐಟಿ ತಂಡ ಅಲ್ಲಿ ಸಿಕ್ಕ ಹಣವನ್ನು ವಶಕ್ಕೆ ಪಡೆದಿದೆ. ಆ ಮನೆಯಲ್ಲಿ ಯುವತಿಗೆ ಸಂಬಂಧಿಸಿದ ಕೆಲವು ವಸ್ತುಗಳು, ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ.

error: Content is protected !!