ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಳ್ಳಿ ನೀಡಿದ್ದ ದೂರನ್ನು ಏಕೆ ದಾಖಲಿಸಿಕೊಳ್ಳಲಿಲ್ಲ ? ಎಂಬ ಪ್ರಶ್ನೆ ಎದುರಾಗಿರುವ ವಿವಾದ ಈಗ ಕೋಟ್೯ ಮೆಟ್ಟಿಲೇರಿದೆ.
ಈ ಸಂಗತಿಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಮತ್ತು ತಲೆ ಬಿಸಿ ಮಾಡುವ ಸಾಧ್ಯತೆ ಇದೆ.
ರಮೇಶ ಜಾರಕಿಹೊಳಿ ಯುವತಿಗೆ ಕೆಲಸ ಕೊಡಿಸುವುದಾಗಿ ಹೇಳ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ದಿನೇಶ ಕಲ್ಲಳ್ಳಿ ದೂರು ಸಲ್ಲಿಸಿದ್ದರು.
ಆದರೆ ಪೊಲೀಸರು 2 ದಿನ ಕಳೆದರೂ ಈ ಕುರಿತು ಎಫ್ಐಆರ್ ದಾಖಲಿಸಿಲ್ಲ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನಸಂಘರ್ಷ ಪರಿಷತ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದೆ.
ನಿರ್ಭಯಾ ಕಾಯ್ದೆಯ ಪ್ರಕಾರ ಲೈಂಗಿಕ ಶೋಷಣೆ ಸಂಬಂಧದ ದೂರು ಬಂದಲ್ಲಿ ತಕ್ಷಣ ದಾಖಲಿಸಿಕೊಳ್ಳಬೇಕು. ಆ ಕುರಿತು ಹೆಚ್ಚಿನ ವಿವರಕ್ಕಾಗಿ ಕಾಯುವಂತಿಲ್ಲ. ಆದರೆ ಈ ಪ್ರಕರಣದ ಲ್ಲಿ ದೂರು ದಾಖಲು ಮಾಡಿ ಎಫ್ ಐ ಆರ್ ಹಾಕಲಿಲ್ಲ ಏಕೆ ಎಂದು ಪ್ರಶ್ನೆ ಮಾಡಿ ಕೋಟ್೯ ಗೆ ಬುಧವಾರ ಮೊರೆ ಹೋಗಲಾಗಿದೆ.
ಹೈಕೊರ್ಟ್ ಮುಖ್ಯ ನ್ಯಾಯಾಧೀಶರು ಈ ಕುರಿತಂತೆ ಯಾವ ಕ್ರಮ ಕೈಗೊಳ್ಳಲಿ ದ್ದಾರೆ ಎಂಬುದು ಕುತೂಹಲದ ಸಂಗತಿ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ