February 21, 2026

Newsnap Kannada

The World at your finger tips!

sumalath l

ಹೆಜ್ಜಾಲದಿಂದ ಚಾಮರಾಜನಗರ ರೈಲು ಯೋಜನೆ ಚಾಲನೆಗೆ ಸಂಸದೆ ಸುಮಲತಾ ಒತ್ತಾಯ

Spread the love

ಹೆಜ್ಜಾಲದಿಂದ ಚಾಮರಾಜನಗರದ ವರೆಗಿನ ರೈಲು ಯೋಜನೆ ಗೆ ಶೀಘ್ರವಾಗಿ ಚಾಲನೆ ನೀಡುವಂತೆ ಸಂಸದೆ ಸುಮಲತಾ ಸಂಸತ್ ಅಧಿವೇಶನದಲ್ಲಿ ಒತ್ತಾಯಿಸಿ ದರು.

ಹೆಜ್ಜಾಲದಿಂದ ಕನಕಪುರ , ಮಳವಳ್ಳಿ , ಕೊಳ್ಳೆಗಾಲ ಮಾರ್ಗವಾಗಿ ಚಾಮರಾಜನಗರ ರೈಲು ಯೋಜನೆಗೆ ಬೇಗ ಚಾಲನೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ನೆನೆಗುದಿಗೆ ಬಿದ್ದ ರೈಲು ಯೋಜನೆಗಿರುವ ಅಡೆತಡೆ ನಿವಾರಿಸಲು ಪ್ರಸ್ತಾಪ ಮಾಡಿದರು.

ರಾಮನಗರ ಜಿಲ್ಲೆಯ ಹೆಜ್ಜಾಲದಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಬಗ್ಗೆ ಎರಡೂವರೆ ವರ್ಷದ ಹಿಂದೆಯೇ ಘೋಷಣೆ ಆಗಿದೆ. ಇನ್ನೂ ಈ ಯೋಜನೆ ಗೆ ಚಾಲನೆ ಸಿಕ್ಕಿಲ್ಲ.‌ ಯಾಕೆ ವಿಳಂಬ ಆಗುತ್ತಿದೆ ಎಂದು ಪ್ರಶ್ನೆ ಮಾಡಿದರು.‌

ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿ ಇದೆ. ಯಾವುದೇ ಅಡೆತಡೆ ಇದ್ದರು ಸುಲಭವಾಗಿ ನಿವಾರಣೆ ಮಾಡಬಹುದು. ಆದ್ದರಿಂದ, ಬಹುನಿರೀಕ್ಷಿತ ರೈಲು ಯೋಜನೆ ಕಾರ್ಯರೂಪಕ್ಕೆ ತರಬೇಕೆಂದು ಸುಮಲತಾ ಸಂ‍ಸತ್ತಿನಲ್ಲಿ ಒತ್ತಾಯಿಸಿದರು.

error: Content is protected !!