December 27, 2024

Newsnap Kannada

The World at your finger tips!

4325437e 95fd 45f3 b970 ed22abf01c63

ಬಿಜೆಪಿ ಟಿಕೆಟ್ ನಿರಾಕರಿಸಿದ ಎಂಬಿಎ ಪದವೀಧರ – ನಾಯಕರಿಗೆ ಶಾಕ್

Spread the love

ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಬಂದಿರುವ ಟಿಕೆಟ್‍ನ್ನು ಯುವಕ ನಿರಾಕರಿಸಿ, ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾನೆ.

ಮಣಿಕುಟ್ಟನ್‍ಪಣಿಯಣ್ (31) ಎಂಬಿಎ ಪದವೀಧರನಿಗೆ ಬಿಜೆಪಿ ಕಡೆಯಿಂದ ಟಿಕೆಟ್ ನೀಡಿದರೂ ಸಹ ಯುವಕ ನಿರಾಕರಿಸಿದ್ದಾನೆ.
ಯುವಕ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.

ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಸಮುದಾಯಕ್ಕೆ ಮೀಸಲಾಗಿದ್ದ ಮನಂತವಾಡಿ ಕ್ಷೇತ್ರದಿಂದ ಮಣಿಕುಟ್ಟನ್‍ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.

ಮಣಿಕುಟ್ಟನ್ ಕೇರಳದ ಪಣಿಯಾ ಬುಡಕಟ್ಟು ಸಮುದಾಯದಲ್ಲಿ ಎಂಬಿಎ ಪದವಿಗಳಿಸಿದ ಮೊದಲ ವ್ಯಕ್ತಿ ಎಂದು ಬಿಜೆಪಿ ಹೇಳಿತ್ತು. ಆದರೆ ಅಭ್ಯರ್ಥಿ ಪಟ್ಟಿಯಲ್ಲಿರುವ ಮಣಿಕುಟ್ಟನ್ ಟಿಕೆಟ್ ನಿರಾಕರಿಸಿದ್ದಾನೆ.

ಕೇಂದ್ರದ ನಾಯಕರು ನನ್ನನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ ನಾನು ಒಂದು ಉದ್ಯೋಗ ಪಡೆದು, ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ಬಿಜೆಪಿ ನನಗೆ ನೀಡಿರುವ ಅವಕಾಶವನ್ನು ನಾನು ಸಂತೋಷದಿಂದ ನಿರಾಕರಿಸುತ್ತೇನೆ ಎಂದು ಮಣಿಕುಟ್ಟನ್ ಹೇಳಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!