ನನ್ನ ವಿರುದ್ಧ 4 ತಿಂಗಳಿಂದ ಬ್ಲ್ಯಾಕ್‍ಮೇಲ್ ನಡೆಯುತ್ತಿತ್ತು. ನಿನ್ನನ್ನು ರಾಜಕೀಯವಾಗಿ ಮುಗಿಸ್ತೀವಿ ಎಂದು ಧಮ್ಕಿ ಹಾಕಿದ್ದರು. ನನ್ನ ಆಪ್ತ ನಾಗರಾಜ್ ಮೂಲಕ ಹಣಕ್ಕಾಗಿ ನನ್ನ ಮೇಲೆ ಒತ್ತಡ ಹಾಕಿದ್ದರು. ಆದರೆ ನಾನು ಆ ಒತ್ತಡಕ್ಕೆ ಮಣಿದಿರಲಿಲ್ಲ ಎಂದು ಹೇಳುವ ಮೂಲಕ 4 ತಿಂಗಳಿಂದ ನಡೆಯುತ್ತಿದ್ದ ರಾಸಲೀಲೆ ಸಿಡಿ ಷಡ್ಯಂತ್ರದ ಬಗ್ಗೆ ಎಸ್‍ಐಟಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಲವು ಮಹತ್ವದ ಮಾಹಿತಿ ಬಹಿರಂಗ ಮಾಡಿದ್ದಾರೆ.
ಸಿಡಿ ಕೇಸ್ ಸಂಬಂಧ ರಮೇಶ್ ಜಾರಕಿಹೊಳಿಯವರು 5 ಕೋಟಿ ರೂ. ಸಂದಾಯ ಮಾಡಿದರೆ ಎನ್ನುವ ಪ್ರಶ್ನೆ ಎದುರಾಗಿದೆ.
ಸಿಡಿ ತೋರಿಸಿದಾಗ ಮಾಜಿ ಸಚಿವರು 5 ಕೋಟಿ ರೂಪಾಯಿ ಹಣ ಸಂದಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಶಾಸಕರ ಮೂಲಕ ರಮೇಶ್ ಜಾರಕಿಹೊಳಿಯವರು ಹಂತ-ಹಂತವಾಗಿ ಹಣ ಸಂದಾಯ ಮಾಡಿದ್ದಾರೆ. ಆದರೆ ಸಿಡಿಕೋರರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದದ್ದರು. ಇನ್ನಷ್ಟು ಹಣ ನೀಡಲು ಮಾಜಿ ಸಚಿವರು ಹಿಂದೇಟು ಹಾಕಿದ್ದರಿಂದ ಗ್ಯಾಂಗ್ ಸಿಡಿ ಬಿಡುಗಡೆ ನಿರ್ಧರಿಸಿತ್ತು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ನಿನ್ನೆ 2 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆಯ ವೇಳೆ ಮಾಜಿ ಸಚಿವರು ಎಸ್‍ಐಟಿ ಪೊಲೀಸರ ಎದುರು 4 ಪುಟಗಳ ಹೇಳಿಕೆ ದಾಖಲಿಸಿದ್ದಾರೆ.
ಎಸಿಪಿ ಧರ್ಮೆಂದ್ರ ಎದುರು ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ರಾಜಕೀಯ ಷಡ್ಯಂತ್ರ, ಬ್ಲ್ಯಾಕ್‍ಮೇಲ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಸಿಡಿ ಬಗ್ಗೆ ಮೊದಲೇ ರಮೇಶ್ ಗೆ ಮೊದಲೇ ಗೊತ್ತಿತ್ತು ಎಂದರೆ ಆ ಸಿಡಿ ಫೇಕ್ ಆಗಲು ಸಾಧ್ಯವಿಲ್ಲ. ಅಲ್ಲದೇ ಬ್ಲ್ಯಾಕ್ ಮೇಲ್ ಗೆ ಹೆದರಿಕೊಂಡು 5 ಕೋಟಿ ರು ಕೊಡುವ ಬದಲು ಪೋಲಿಸರಿಗೆ ಏಕೆ ಮಾಹಿತಿ ಕೊಡಲಿಲ್ಲ ಎಂಬ ಅನೇಕ ಸಂಗತಿಗಳ ಬಗ್ಗೆ ರಮೇಶ್ ಉತ್ತರ ನೀಡಬೇಕಾಗಿದೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ