ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಂದೂವರೆ ವರ್ಷದ ಹಿಂದೆ ಬೆಂಗಳೂರಿನ ಸದಾಶಿವನಗರದಲ್ಲಿ 30 ಕೋಟಿ ರು ನೀಡಿ ಖರೀದಿಸಿದ್ದ ಮನೆಯೇ ಅವರಿಗೆ ಮುಳುವಾಗಿದೆಯಾ? ಅವರ ಸಂಕಷ್ಟಗಳಿಗೆ ಈ ಹೊಸ ಮನೆಯ ವಾಸ್ತು ದೋಷವೇ ಕಾರಣವೇ ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರಮೇಶ್ ಜಾರಕಿಹೊಳಿ ಬೆಂಗಳೂರಿನ ಸದಾಶಿವನಗರದಲ್ಲಿ ಒಂದೂವರೆ ವರ್ಷದ ಹಿಂದೆ ಖರೀದಿಸಿದ್ದ ಮನೆಯನ್ನು ಇದೀಗ ಮಾರಲು ಮುಂದಾಗಿದ್ದಾರೆ.
ಒಂದು ಮೂಲಗಳ ಪ್ರಕಾರ ಈ ಪ್ರವೇಶಿಸಿದಾಗಿನಿಂದ ಅವರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಿದೆ.
ರಮೇಶ್ ಜಾರಕಿಹೊಳಿ ಸದಾಶಿವ ನಗರದಲ್ಲಿರುವ ಮನೆ ಬದಲಿಸಿ ಮಲ್ಲೇಶ್ವರದ ಮಂತ್ರಿ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಲು ಚಿಂತನೆ ಮಾಡಿದ್ದಾರೆ. ಮಾಚ್೯ ಅಂತ್ಯದೊಳಗೆ ವಾಸಸ್ಥಾನ ಬದಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರತಿಷ್ಠೆಗಾಗಿ ಸದಾಶಿವ ನಗರದಲ್ಲಿ ಮನೆ ಖರೀದಿಸಿದ ರಮೇಶ್ ಜಾರಕಿಹೊಳಿ ಇಡೀ ಕುಟುಂಬ ಈ ಮನೆಯಲ್ಲಿ ವಾಸವಾಗಿತ್ತು.
ಸಂಕಷ್ಟಗಳು ಎದುರಾದ ಹಿನ್ನೆಲೆಯಲ್ಲಿ ಮನೆಯ ವಾಸ್ತು ಪರಿಶೀಲಿಸಿದಾಗ ದೋಷ ಇರುವುದಾಗಿ ಜ್ಯೋತಿಷಿಗಳು ಹೇಳಿದ್ದಾರೆ, ಮನೆ ಬದಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು