February 20, 2026

Newsnap Kannada

The World at your finger tips!

cd

ಸಿಡಿ ಪ್ರಕರಣ : ಆ ಮಹಾ ನಾಯಕನ ಫೋಟೋ, ವಿಡಿಯೋ ನಾಳೆ ಬಹಿರಂಗ ?

Spread the love

ಸಿಡಿ ಯುವತಿ ಪ್ರತ್ಯಕ್ಷ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ತಂಡ ಇದೀಗ `ಮಹಾ ನಾಯಕ’ನಿಗೆ ಪ್ರತ್ಯುತ್ತರ ‌ನೀಡಲು ರೆಡಿಯಾಗಿದೆ.

ಸೋಮವಾರ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಸ್ತಾಪ ಮಾಡುವ ಮುನ್ನವೇ ಮಹಾನಾಯಕನ ಹೆಸರನ್ನು ಬಹಿರಂಗ ಮಾಡೋಕೆ ರಮೇಶ್ ಟೀಂ ತಂತ್ರಗಾರಿಕೆ ಹೆಣೆದಿದೆ ಎಂದು ತಿಳಿದು ಬಂದಿದೆ.

ಆ ಮಾಹಾನ್ ನಾಯಕ ಪಾಲ್ಗೊಂಡಿದ್ದ ಕಾರ್ಯಕ್ರಮ ಒಂದರ ಫೋಟೋ, ವಿಡಿಯೋವನ್ನು ಜಾರಕಿಹೊಳಿ ತಂಡ ಸಂಗ್ರಹಿಸಿದೆ. ಆ ವಿಡಿಯೋದಲ್ಲಿ ಆ ಮಹಾನ್ ನಾಯಕ ಇದ್ದಾನೆ. ಆ ವಿಡಿಯೋ, ಫೋಟೋ ಸಾಕ್ಷಿ ಇಟ್ಟುಕೊಂಡು ಹೆಸರು ಬಹಿರಂಗಪಡಿಸಲು ಮಾಸ್ಟರ್ ಪ್ಲಾನ್‌ ಮಾಡಿದೆ.

ಜಾರಕಿಹೊಳಿ ತಂಡದ ಮಾಸ್ಟರ್ ಪ್ಲಾನ್‍ಗೆ ಕಾನೂನು ತಜ್ಞರಿಂದ ಅನುಮತಿ ಸಿಕ್ಕಿಲ್ಲ. ಹೆಸರು ಬಹಿರಂಗ ಪಡಿಸಿದರೆ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಆಗ ನಮ್ಮ ತಂತ್ರಗಾರಿಕೆ ವಿಫಲ ಆಗಬಹುದು. ಸ್ವಲ್ಪ ಕಾಲ ಕಾದು ನೋಡುವ ತಂತ್ರವನ್ನು ಅನುಸರಿಸೋಣ ಎಂದು ರಮೇಶ್ ಪರ ವಕೀಲರ ಸಲಹೆ ನೀಡಿದ್ದಾರೆ ಎಂದು‌ ಹೇಳಲಾಗಿದೆ.

error: Content is protected !!