ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಕ್ಲೋಸ್ ಅಗಿದೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಜಿಟಿಡಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಹಾಲು ಒಕ್ಕೂಟ ಚುನಾವಣೆ ಹಿನ್ನೆಲೆ ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ, ಆದರೂ ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆಗೆ ಇಳಿದಿದ್ದೇವೆ. ನಮ್ಮ ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ದುರಹಂಕಾರದಲ್ಲಿ ಮಾತಾಡುತ್ತಿದ್ದಾರೆ. ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ ಎಂದು ಹೇಳಿದ್ದಾರೆ.
ಜಿಟಿಡಿ ಬಗ್ಗೆ ಹೆಚ್.ಡಿ.ದೇವೇಗೌಡರಿಗೆ ಸ್ವಲ್ಪ ಸಾಫ್ಟ್ ಕಾರ್ನರ್ ಇತ್ತು. ಈಗ ಅವರಿಗೂ ಇರುವ ಸತ್ಯ ಹೇಳಿ ಅವರನ್ನು ಒಪ್ಪಿಸುತ್ತೇನೆ. ಇಂಥವರ ಸಹವಾಸ ಬಿಡಬೇಕು. ಇಲ್ಲದೆ ಇದ್ದರೆ ವಿಷ ಆಗಿ ಪಕ್ಷ ಹಾಳು ಮಾಡುತ್ತಾರೆ ಎಂದು ಹೇಳಿ ಒಪ್ಪಿಸುವೆ. ನಾನು ಈ ಪಕ್ಷದಲ್ಲಿ ಸಕ್ರಿಯಾನಾಗಿ ಕೆಲಸ ಮಾಡುವ ದಿನದವರೆಗೂ ಜಿಟಿಡಿಯನ್ನು ಜೆಡಿಎಸ್ ಗೆ ಮತ್ತೆ ಸೇರಿಸುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.
ನಾನು ಯಾರನ್ನು ಪಕ್ಷದಿಂದ ಕಳುಹಿಸಿಲ್ಲ. ಅವರದ್ದೇ ಆಗಿರುವ ನಿರ್ಧಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಸಣ್ಣ ಕಾರ್ಯಕರ್ತರೆ ನಮ್ಮ ಪಕ್ಷಕ್ಕೆ ಸಾಕು. ದೊಡ್ಡದಾಗಿ ಬೆಳೆದು ನಿಂತಿರುವರು ನಮ್ಮ ಪಕ್ಷಕ್ಕೆ ಬೇಡ. ಈ ಹಿಂದೆ ಹೋದವರನ್ನು ಮರಳಿ ಪಕ್ಷಕ್ಕೆ ಕರೆದುಕೊಂಡು ಅನುಭವಿಸಿದ್ದೇವೆ ಇದೇ ಫೈನಲ್ ನಿರ್ಧಾರವಾಗಿದೆ. ನನ್ನ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕು ಅಷ್ಟೇ ಎಂದಿದ್ದಾರೆ.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು