ನ್ಯೂಸ್ ಸ್ನ್ಯಾಪ್.
ದೆಹಲಿ.
ಭಾರತೀಯ ಸೇನೆಯಲ್ಲಿಯೇ ಸೈನಿಕರು ಮತ್ತು ಸೇನಾಧಿಕಾರಿಗಳ ನಡುವೆ ತಾರತಮ್ಯ ಅಧಿಕವಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪವನ್ನು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಒಪ್ಪಿಕೊಂಡಿದ್ದಾರೆ.
ಬಹುದಿನಗಳಿಂದಲೂ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸೇನೆಯ ಕುರಿತ ಅನೇಕ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುತ್ತಿದ್ದರು. ಆದರೆ ಯಾರೂ ಸಹ ಸಮರ್ಪಕ ಉತ್ತರ ನೀಡಿರಲ್ಲ. ರಾಹುಲ್ ಗಾಂಧಿಯವರು ರಕ್ಷಣಾ ಇಲಾಖೆಯ ಸಂಸದೀಯ ಸಭೆಯಲ್ಲಿ ಪ್ರಶ್ನೆ ಕೇಳುವ ಧೈರ್ಯವಿಲ್ಲದೇ ಸಾರ್ವಜನಿಕ ಸಭೆಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕೇಂದ್ರದ ಸಚಿವರು ಗೇಲಿ ಮಾಡಿದ್ದರು.
ಆದರೆ ಇಂದು ನಡೆದ ರಕ್ಷಣಾ ಇಲಾಖೆಯ ಸಂಸದೀಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಸೇನೆಯಲ್ಲಿರುವ ಅಸಮಾನತೆಯ ಬಗೆಗಿನ ಪ್ರಶ್ನೆಗಳನ್ನು ಎತ್ತಿದ್ದಾರೆ.
ರಾಹುಲ್ ರವರು ‘ಸೇನೆಯಲ್ಲಿನ ಸೈನಿಕರ, ಸೈನಿಕಾಧಿಕಾರಿಗಳ ಊಟದಲ್ಲಿ ತಾರತಮ್ಯವೇಕೆ? ಬಿಸಿಲು, ಮಳೆ, ಚಳಿ ಎನ್ನದೇ ಗಡಿ ಕಾಯುವವರಿಗೆ ಕಡಿಮೆ ಗುಣಮಟ್ಟದ ಆಹಾರ, ಏನೂ ಮಾಡದೇ ಇರುವ ಸೈನಿಕ ಅಧಿಕಾರಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಏಕೆ’ ಎಂಬ ಪ್ರಶ್ನೆಗೆ ಬಿಪಿನ್ ಮೊದಲು ಕೊಟ್ಟದ್ದು ಹಾರಿಕೆಯ ಉತ್ತರ.
ನಂತರ ರಾಹುಲ್ ತೋರಿಸಿದ ಸಾಕ್ಷ್ಯಗಳನ್ನು ನೋಡಿದ ರಾವತ್, ‘ಸೈನಿಕರು ಸಾಮಾನ್ಯವಾಗಿ ಹಳ್ಳಿಗಳಿಂದ ಬಂದವರು. ಹಾಗಾಗಿ ರೊಟ್ಟಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಧಿಕಾರಿಗಳು ನಗರ ಪ್ರದೇಶಗಳಿಂದ ಬರುವುದರಿಂದ ಅವರು ಬ್ರೆಡ್, ಚೀಜ್ ಆಯ್ಕೆ ಮಾಡಿಕೊಳ್ಳುತ್ತಾರೆ’ ಎಂದು ಹೇಳುವ ಮೂಲಕ ಸೇನೆಯಲ್ಲಿ ತಾರತಮ್ಯ ನಡೆಯುತ್ತಿರುವದನ್ನು ಬಿಪಿನ್ ರಾವತ್ ಅವರೇ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ