ಸಿಡಿ ಪ್ರಕರಣದಲ್ಲಿ ಬ್ಲ್ಯಾಕ್ ಮೇಲ್ ಮಾಡುವ ತಂತ್ರ – ರಮೇಶ್ ಜಾರಕಿಹೊಳಿ ದೂರು

Team Newsnap
1 Min Read

ರಾಸಲೀಲೆ ಸಿಡಿ ಪ್ರಕರಣಕ್ಕೆ ಕೊನೆಗೆ ನೆಲೆ, ಬಲೆ ಬಂದಂತಾಗಿದೆ. ಆಪ್ತನ ಮೂಲಕ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ ನಕಲಿ ಸಿಡಿ ತಯಾರಿಸಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ದೂರು ಬೆಂಗಳೂರಿನ ಸದಾಶಿವ ನಗರದ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೇ ತಮ್ಮ ಆಪ್ತ, ಮಾಜಿ ಶಾಸಕ ಎಂ.ವಿ. ನಾಗರಾಜ್ ಮೂಲಕ ಒಂದು ಪುಟದ ದೂರು ದಾಖಲಿಸಿದ್ದಾರೆ.

ರಮೇಶ್ ಜಾರಕಿಹೊಳಿ ಪರವಾಗಿ ಸಲ್ಲಿಸಲಾದ ಒಂದು ಪುಟದ ಲಿಖಿತ ದೂರಿನಲ್ಲಿ ನಕಲಿ ಸಿಡಿ ತಯಾರಿಸಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿ ತೇಜೋವಧೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಸಿಡಿಯಲ್ಲಿರುವುದು ತಾನಲ್ಲ ಎಂದು ಹೇಳಿರುವ ರಮೇಶ್ ಜಾರಕಿಹೊಳಿ, ವಕೀಲರ ಸಲಹೆ ಮೇರೆಗೆ ಯಾರ ವಿರುದ್ಧವೂ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

ಈಗ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ, ಎಫ್ಐಆರ್ ದಾಖಲಿಸಿಕೊಂಡು ಎಸ್ಐಟಿ ಮೂಲಕ ತನಿಖೆಯನ್ನು ಚುರುಕುಗೊಳಿಸಲು ಒಂದು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.

ದೂರಿನಲ್ಲಿರುವ ಆರೋಪ ಗಳು ಏನು?

  • ಈ ಸಿಡಿ ಸಂಪೂರ್ಣ ನಕಲಿ
  • ಇದೊಂದು ಷಡ್ಯಂತ್ರ್ಯ ಹಾಗೂ ಬೆದರಿಕೆ ಹಾಕುವ ಪ್ರಯತ್ನ
  • ಸಿಡಿ ಮಾಡಿ ಬ್ಲ್ಯಾಕ್ ಗತವಮೇಲ್ ಮಾಡುವ ತಂತ್ರವಿದೆ.
  • ಸಿಡಿಯಲ್ಲಿನ ಸತ್ಯಾಸತ್ಯತೆ ಪತ್ತೆ ಹಚ್ಚಲು ಮನವಿ
Share This Article
Leave a comment