January 11, 2025

Newsnap Kannada

The World at your finger tips!

RISHI KUMAR SWAMIJI

ಗೋಡೆ, ಮಂಚ, ಹಾಸಿಗೆ, ದಿಂಬುಗಳಿಗೆ ಮಾತು ಬಂದಿದ್ದರೆ ನಿತ್ಯ ವೂ ವರ್ಲ್ಡ್ ವಾರ್ – ಋಷಿ ಕುಮಾರ್ ಸ್ವಾಮೀಜಿ

Spread the love

ಕಂಡವರ ಬೆಡ್ ರೂಮಿನಲ್ಲಿ ಕ್ಯಾಮರಾ ಇಡುವ ಅಧಿಕಾರ ಕೊಟ್ಟವರು ಯಾರು ಸ್ವಾಮಿ ಇವರಿಗೆ? ಬೆಡ್ ರೂಮಿನ ಕಿಡಕಿ, ಬಾಗಿಲು, ಗೋಡೆ, ಮಂಚ ಹಾಗೂ ಹಾಸಿಗೆ, ದಿಂಬುಗಳಿಗೆ ಮಾತು ಬಂದಿದ್ದರೆ ನಿತ್ಯ ವೂ ವರ್ಲ್ಡ್ ವಾರ್‌ಗಳೇ ನಡೆದು ಹೋಗುತ್ತಿದ್ದವು.

ಹೀಗಂತ ಹೇಳಿದವರು ಬೇರೆ ಯಾರೂ ಅಲ್ಲ ಬೆಂಗಳೂರಿನ ಕಾಳಿಮಠದ ಋಷಿಕುಮಾರ್ ಸ್ವಾಮೀಜಿ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರವಾಗಿ ಮಾತನಾಡಿ , ನಾನೊಬ್ಬ ಗಂಡಸು ಎಂದು ಪಾಸಿಟಿವ್ ಆಗಿ ಈ ಪ್ರಕರಣವನ್ನು ತೆಗೆದುಕೊಳ್ಳಿ ಎಂದು
ರಾಸಲೀಲೆ ಕುರಿತು ವ್ಯಾಖ್ಯಾನ ಮಾಡಿದ್ದಾರೆ ಋಷಿ ಕುಮಾರ ಸ್ವಾಮೀಜಿ. ‌
ಗೋಕಾಕ್ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ನಾನು ಕಳೆದ ಮೂರು ದಿನಗಳಿಂದ ಗೋಕಾಕ್‌ನಲ್ಲಿ ಸರ್ವೇ ಮಾಡಿದ್ದೇನೆ. ರಮೇಶ್ ವೈಯಕ್ತಿಕ ಜೀವನ ಇಲ್ಲಿ ಯಾರಿಗೂ ಬೇಕಾಗಿಲ್ಲ, ಜನರಿಗೆ ಬೇಕಾಗಿರುವುದು ಅವರ ನಾಯಕತ್ವ. ಜಾರಕಿಹೊಳಿ ಯವರು ಇದರ ಬಗ್ಗೆ ತಲೆಕಡೆಸಿ ಕೊಳ್ಳಬಾರದು. ಒಂದು ವೇಳೆ ಅದು ನಿಜವೇ ಆಗಿದ್ದರೂ ಸಹ ಹೂಂ ಅನ್ನಿ ಸರ್, ಹೊರಗೆ ಬನ್ನಿ ಎಂದು ರಮೇಶ್ ಗೆ ಸಲಹೆ ನೀಡಿದ್ದಾರೆ.‌

ನಿಮ್ಮ ಊರಿನ ಚರಂಡಿ ಕ್ಲೀನ್ ಮಾಡಿಸಿಲ್ವಾ? ಲೈಟ್ ಹಾಕಿಸಿಲ್ವಾ? ಅದನ್ನು ಕೇಳುವ ಅಧಿಕಾರ ನಮಗಿದೆ ನಿಮ್ಮ ವೈಯಕ್ತಿಯ ವಿಷಯ ನಮಗೆ ಬೇಡ ಸರ್. ಯಾರ ವೈಯಕ್ತಿಕ ಜೀವನ ಬಗ್ಗೆ ಯಾರಿಗೂ ಮಾತನಾಡುವ ರೈಟ್ಸ್ ಇಲ್ಲ‌ ಎಂದರು.

ವೈಯಕ್ತಿಕ ವಿಚಾರ ಇಟ್ಟುಕೊಂಡು ಒಬ್ಬರನ್ನು ತೆಜೋವಧೆ ಮಾಡ್ತಿನಿ, ರಾಜಕೀಯವಾಗಿ ಮುಗಿಸ್ತಿನಿ ಅನ್ನೋದು ನಿಮ್ಮ ಭ್ರಮೆ ಅಷ್ಟೇ, ಇನ್ನೊಬ್ಬರ ತೇಜೋವಧೆ ಮಾಡಿದರೆ ನಿನ್ನ ತೇಜೋವಧೆ ಮಾಡಲು ಭಗವಂತನಿದ್ದಾನೆ. ಸಿಬಿಐ ತನಿಖೆನೋ? ಸಿಒಡಿ ತನಿಖೆಯೋ ಅದು ನಮಗೆ ಬೇಡ ನಾವು ಅಜ್ಜಯ್ಯನವರು ಕೂತು ಹೇಳ್ತಿದ್ದೇವೆ ಮತ್ತೆ ನಿಮಗೆ ಯಡಿಯೂರಪ್ಪ ಸಚಿವ ಸ್ಥಾನ ಕೊಡ್ತಾರೆ. ಇನ್ನು ಎರಡೇ ತಿಂಗಳಿನಲ್ಲಿ ನಿಮಗೆ ಮತ್ತೆ ಮಂತ್ರಿ ಪದವಿ ಸಿಗುತ್ತೆ ತಲೆ ಕೆಡಿಸಿಕೊಳ್ಳಬೇಡಿ ಭವಿಷ್ಯ ವನ್ನೂ ಕೂಡ ಋಷಿ ಕುಮಾರ್ ಸ್ವಾಮಿ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!