January 11, 2025

Newsnap Kannada

The World at your finger tips!

kumarswamy cha

ಪಕ್ಷ ಬಿಟ್ಟು ಹೋಗುವವರನ್ನು ನಾವು ತಡೆಯುವುದಿಲ್ಲ – ಎಚ್ ಡಿ ಕೆ

Spread the love

ಪಕ್ಷದ ಬಾಗಿಲು ತೆರೆದಿದೆ ಹೋಗೋರು ಹೋಗಬಹುದು.‌ ಬರುವವರು‌ ಬರಬಹುದು ಎಂದು ಮಾಜಿ ಸಿಎಂ‌ ಕುಮಾರಸ್ವಾಮಿ ಗುರುವಾರ ಮೈಸೂರಿನಲ್ಲಿ ‌ಹೇಳಿದ್ದಾರೆ.‌

ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್‌ ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಬರೋರು ಬರಬಹುದು. ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳಬರು ಹೋದರೆ ಹೊಸಬರು ಬರ್ತಾರೆ ಎಂದರು.

ಮಧು ಬಂಗಾರಪ್ಪ ಪಕ್ಷ ತೊರೆಯು ವುದು ಹಳೆಯ ವಿಚಾರ‌. ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ. ಯಾರು ಹೋಗಲಿ ಬಿಡಲಿ ಪಕ್ಷಕ್ಕೇನೂ ಹಾನಿ ಇಲ್ಲ. ಪಕ್ಷ ಬಿಟ್ಟು ‌ಹೋಗುವವರಿಂದ‌ ಲಾಭವೂ ಇಲ್ಲ ಎಂದರು.

ದೇವೆಗೌಡರು ಯಾರನ್ನು ಬೆಳೆಸಿದ್ದಾರೋ, ಯಾರನ್ನು ಹೆಚ್ಚಾಗಿ ನಂಬಿದ್ದರೋ ಅವರೇ ಜಾಸ್ತಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಹೋಗಬೇಕಾದರೆ ಏನೇನೋ ಒಂದು ಸಬೂಬು ಹೇಳಿಕೊಂಡು ಹೋಗ್ತಾರೆ. ಅದೇ ರೀತಿ ಕಾರ್ಯಕರ್ತರನ್ನು ಬೆಳೆಸುವ ಶಕ್ತಿ ಜೆಡಿಎಸ್‌ಗೆ ಇದೆ ಎಂದರು.

ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದಿದರು.

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ನಾಡಿನ ಜನತೆಗೆ ಶಿವರಾತ್ರಿ ಶುಭಾಶಯ ತಿಳಿಸಿ, ನಾಡಿನ ಜನತೆಗೆ ಒಳಿತಾಗಲಿ ಅಂತಾ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಈ ವೇಳೆ ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್ ಹಾಗೂ ಬೋಜೆಗೌಡ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!