November 16, 2024

Newsnap Kannada

The World at your finger tips!

ias l

ನನ್ನ ಸಾವಿಗೆ ಐಪಿಎಸ್ ಅಧಿಕಾರಿ ಪ್ರಾಚಿ ಸಿಂಗ್ ಕಾರಣ – ಆತ್ಮಹತ್ಯೆ ಗೆ ಶರಣಾದ ಯುವಕ‌

Spread the love

ಲಕ್ನೋ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಪ್ರಾಚಿ ಸಿಂಗ್ ವಿರುದ್ಧ ಪತ್ರ ಬರೆದು ಯುವಕನೋರ್ವ ಆತ್ಮಗತ್ಯೆಗೆ ಶರಣಾಗಿದ್ದಾನೆ.

ಚಂದಗಂಜ್ ನಿವಾಸಿ ವಿಶಾಲ್ (26) ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ವೇಶ್ಯಾವಾಟಿಕೆಯ ದಂಧೆಯಲ್ಲಿ ವಿಶಾಲ್ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು.

ಮಾರ್ಚ್ 21ರಂದು ಜಾಮೀನು ಪಡೆದು ವಿಶಾಲ್ ಹೊರ ಬಂದಿದ್ದರು. ಈ ಘಟನೆಯಿಂದಾಗಿ ವಿಶಾಲ್ ಮಾನಸಿಕವಾಗಿ ನೊಂದಿದ್ದರಿಂದ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ವಿವರ :

ಫೆಬ್ರವರಿ 13ರಂದು ವಿಶಾಲ್ ರಸ್ತೆ ಬದಿಯ ಅಂಗಡಿಯಲ್ಲಿ ತಿಂಡಿ ಮಾಡುತ್ತಿದ್ದನು. ಅಲ್ಲೇ ಪಕ್ಕದಲ್ಲಿದ್ದ ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದರು.

ಈ ಪ್ರಕರಣದಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದರು. ಪಕ್ಕದಲ್ಲಿಯೇ ತಿಂಡಿ ಮಾಡುತ್ತಿದ್ದ ವಿಶಾಲ್ ನನ್ನು ಸಹ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

20 ದಿನಗಳ ನಂತ್ರ ನ್ಯಾಯಾಲಯ ಜಾಮೀನು ನೀಡಿತ್ತು. ಆದ್ರೆ ಈ ಎಲ್ಲ ಬೆಳವಣಿಗೆಯಿಂದ ಮಗ ಅವಮಾನಿತನಾಗಿದ್ದನು ಎಂದು ವಿಶಾಲ್ ತಂದೆ ಅರ್ಜುನ್ ಹೇಳಿದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಗೆ ವಿಶಾಲ್ ಕೆಲಸಕ್ಕೆ ಹೋಗುವದಾಗಿ ಹೇಳಿ ಮನೆಯಿಂದ ಹೊರ ಬಂದಿದ್ದಾನೆ. ಆದ್ರೆ ಕೆಲಸಕ್ಕೆ ಹೋಗದೇ ಬೆಳಗ್ಗೆ 11 ಗಂಟೆಗೆ ರೈದಾಸ್ ಕ್ರಾಸಿಂಗ್ ಬಳಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕೂ ಮೊದಲು ಡೆತ್ ನೋಟ್ ಬರೆದಿಟ್ಟು ತನ್ನ ಸಾವಿಗೆ ಐಪಿಎಸ್ ಅಧಿಕಾರಿ ಪ್ರಾಚಿ ಸಿಂಗ್ ಕಾರಣ ಎಂದು ಹೇಳಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!