ಶಂಕರ್ ಬಿದರಿ ಇ- ಮೇಲ್ ಹ್ಯಾಕ್ ಮಾಡಿದ್ದ ಮೂವರ ಬಂಧನ

Team Newsnap
1 Min Read

ನಿವೃತ್ತ ಡಿಜಿ-ಐಜಿಪಿ ಶಂಕರ್​ ಬಿದರಿ ಇ-ಮೇಲ್​ ಐಡಿ ಹ್ಯಾಕ್ ಮಾಡಿ  25 ಸಾವಿರ ರು ಕಿತ್ತುಕೊಂಡಿದ್ದ ಮೂವರು ಹ್ಯಾಕರ್​ಗಳನ್ನು ಬಂಧಿಸುವಲ್ಲಿ ಸೈಬರ್​ ಪೊಲೀಸರು ಯಶಸ್ವಿಯಾಗಿದ್ದಾರೆ.

ಥಿಯಾ, ಸೆರೋಪಾ ಹಾಗೂ ಇಸ್ಟರ್​​ ಕೊನ್ಯಾಕ​ ಬಂಧಿತ ಆರೋಪಿಗಳು.

ನಾಗಾಲ್ಯಾಂಡ್​ ಮೂಲದ ಈ ಆರೋಪಿ ಗಳು ​ನವೆಂಬರ್​ನಿಂದ ಇತ್ತೀಚೆಗೆ 60 ಬ್ಯಾಂಕ್​ ಅಕೌಂಟ್​ಗಳನ್ನು ತೆರೆದಿದ್ದರು.

ನಾಗಾಲ್ಯಾಂಡ್​ನ ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ಆಧಾರ್​ ಕಾರ್ಡ್​, ಮನೆ ಬಾಡಿಗೆ ಪತ್ರಗಳನ್ನ ಪಡೆದುಕೊಳ್ಳುತ್ತಿದ್ದರು. ಅದನ್ನು ಬಳಸಿ ಈ ಅಕೌಂಟ್ಸ್​ಗಳನ್ನು ತೆರೆದಿದ್ದರು ಎನ್ನಲಾಗಿದೆ.

ಕಳೆದ ಫೆಬ್ರವರಿಯಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ಇ-ಮೇಲ್​ ಐಡಿಯನ್ನು ಹ್ಯಾಕ್​ ಮಾಡಿದ್ದರು. ಈ ಮೂಲಕ ಬಿದರಿ ಸ್ನೇಹಿತರಿಗೆ ಮೆಸೇಜ್​ ಮಾಡಿ 25,000 ರು ಕಿತ್ತುಕೊಂಡಿದ್ದರು.

ಈ ಕುರಿತಂತೆ ಶಂಕರ್​ ಬಿದರಿಯವರು ಆಗ್ನೇಯ ವಿಭಾಗದ ಸೈಬರ್​ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತರಿಂದ 13 ಪ್ಯಾನ್​ ಕಾರ್ಡ್​, 6 ಆಧಾರ್​ ಕಾರ್ಡ್​, 2 ಎಟಿಎಂ, 2‌ ಮೊಬೈಲ್​ಗಳನ್ನ  ವಶಕ್ಕೆ ಪಡೆದಿದ್ದಾರೆ. ಸುಮಾರು 20 ಬ್ಯಾಂಕ್​ ಅಕೌಂಟ್​ಗಳಿಂದ 2ಲಕ್ಷ ರೂಪಾಯಿಯನ್ನ ಜಪ್ತಿ ಮಾಡಲಾಗಿದೆ.

Share This Article
Leave a comment