December 27, 2024

Newsnap Kannada

The World at your finger tips!

discipline , mandya , politics

Mandya MLA Ravi's discipline lesson from Chunchanagiri shri 'ಶರ್ಟ್ ಬಟನ್ ಹಾಕಿ' ಮಂಡ್ಯ ಶಾಸಕ ರವಿಗೆ ಚುಂಚನಗಿರಿ ಶ್ರೀಗಳ ಶಿಸ್ತಿನ ಪಾಠ

ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ – 500 ಕೋಟಿ ರು ಮೀಸಲು – ಶ್ರೀ ಗಳ‌ ಅಭಿನಂದನೆ

Spread the love

ಸಿಎಂ ಯಡಿಯೂರಪ್ಪ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ವಿವಿಧ ನಿಗಮ ಮಂಡಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ.

ಇಂದಿನ ಬಜೆಟ್ ನಲ್ಲಿ ವಿವಿಧ ಮಂಡಳಿಗಳ ಅಭಿವೃದ್ಧಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅನುದಾನ ಘೋಷಿಸಿದ್ದಾರೆ.

ಅಲ್ಪಸಂಖ್ಯಾತರ ಏಳಿಗೆಗಾಗಿ 1,500 ಕೋಟಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮತ್ತು ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪಸಿ 500 ಕೋಟಿ ಮೀಸಲಿರಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರು.ಗಳ ಅನುದಾನ. ಈಗಾಗಲೇ 100 ಕೋಟಿ ಬಿಡುಗಡೆಗೊಳಿಸಲಾಗಿದೆ. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪನೆ ಹಾಗೂ ನಿಗಮ ಚಟುವಟಿಕೆಗಳಿಗೆ 500 ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ. ಅಲ್ಪಸಂಖ್ಯಾತರ ಏಳಿಗೆಗಾಗಿ 1,500 ಕೋಟಿ ಮೀಸಲಿಟ್ಟಿದ್ದಾರೆ.

ನಿರ್ಮಲಾನಂದ ಶ್ರೀಗಳಿಂದ ಅಭಿನಂದನೆ :

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೃತೃತ್ವದ ರಾಜ್ಯ ಸರ್ಕಾರಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.

ಕೋಲಾರ ತಾಲೂಕಿನ ಸೀಸಂದ್ರ ಗ್ರಾಮದಲ್ಲಿರುವ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ರಾಜ್ಯದ ಬಹು ದೊಡ್ಡ ಸಮುದಾಯ ನಮ್ಮದು. ರಾಜ್ಯ ಸರ್ಕಾರಕ್ಕೆ ಈ ಹಿಂದೆ ನಾವು ನಿಗಮ ಮಂಡಳಿಗಾಗಿ ಒತ್ತಾಯ ಮಾಡಿದ್ವಿ. ಅದರಂತೆ ಈ ಬಜೆಟ್ ನಲ್ಲಿ ನಿಗಮ ಸ್ಥಾಪನೆ ಮಾಡಿರುವುದಕ್ಕೆ ಅಭಿನಂದನೆ ಎಂದು ಹೇಳಿದರು.

500 ಕೊಟಿ ರೂಪಾಯಿ ಮೀಸಲಿಟ್ಟಿರುವ ರಾಜ್ಯ ಸರ್ಕಾರವನ್ನು ಅಬಿನಂಧಿಸುತ್ತೇನೆ. ಇದಕ್ಕೆ ಶ್ರಮಿಸಿದವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

Copyright © All rights reserved Newsnap | Newsever by AF themes.
error: Content is protected !!