ಕೊಪ್ಪಳ ಮೂಲದ ಉದ್ಯಮಿ ಯೊಬ್ಬರಿಗೆ ನಗ್ನ ವಿಡಿಯೋ, ಫೋಟೋಗಳನ್ನು ತೋರಿಸಿ ಬೆದರಿಸಿ, ಹಣ ವಸೂಲಿ ಮಾಡಿದ ಆರೋಪದಲ್ಲಿ ಹೊಸಪೇಟೆ ಯ ಮಹಿಳೆ ಹಾಗೂ ಆಕೆಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಗೀತಾ ಹಾಗೂ ಆಕೆಯ ಪುತ್ರ ಬಂಧಿತ ಆರೋಪಿಗಳು. ಕೊಪ್ಪಳದ ಕಾರ್ಖಾನೆ ಉದ್ಯಮಿ ಸುಬ್ಬಾರೆಡ್ಡಿ ಹೊಸಪೇಟೆಯ ಎಂ.ಜೆ. ನಗರದ 6ನೇ ಅಡ್ಡರಸ್ತೆಯಲ್ಲಿ ಸಾನ್ವೀ ಸ್ಟೀಲ್ಸ್ ಕಚೇರಿಯನ್ನು ತರೆದಿದ್ದಾರೆ.
ಕಚೇರಿ ಎದುರಿನಲ್ಲಿ ಗೀತಾ ಮನೆ ಇದೆ. ಮಾರ್ಚ್ 2019ರಲ್ಲಿ ಸುಬ್ಬಾರೆಡ್ಡಿ ಹಾಗೂ ಗೀತಾ ಅವರಿಗೆ ಪರಿಚಯವಾಗಿದೆ.
ಒಂದು ದಿನ ಸುಬ್ಬಾರೆಡ್ಡಿ ಅವರನ್ನು ಆರೋಪಿತ ಮಹಿಳೆ ಮನೆಗೆ ಆಹ್ವಾನಿಸಿದ್ದಾಳೆ. ಆಗ ಚಹಾ ಕುಡಿದ ಮೇಲೆ ಸುಬ್ಬಾರೆಡ್ಡಿ ಅವರಿಗೆ ಪ್ರಜ್ಞೆ ತಪ್ಪಿದೆ. ಎರಡು ಗಂಟೆ ನಂತರ ಅವರಿಗೆ ಎಚ್ಚರವಾಗಿದೆ.
ಬಳಿಕ ಅವರು ಮನೆಗೆ ಹೋಗಿದ್ದಾರೆ ಎರಡು ದಿನದ ನಂತರ ಉದ್ಯಮಿಗೆ ಮಹಿಳೆಯಿಂದ ದೂರವಾಣಿ ಕರೆ ಬಂದಿದೆ. ನಿಮ್ಮ ನಗ್ನ ವಿಡಿಯೋಗಳು ನಮ್ಮ ಬಳಿ ಇದ್ದು, 30 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ನಂತರ ಉದ್ಯಮಿ 15 ಲಕ್ಷ ರೂ. ಆನ್ಲೈನ್ ಮೂಲಕ ಮಹಿಳೆ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೇ, 2021 ಮಾರ್ಚ್ 2 ರಂದು ಗೀತಾ ಹಾಗೂ ಆಕೆ ಪುತ್ರ, ಸುಬ್ಬಾರೆಡ್ಡಿ ಮನೆಯಲ್ಲಿ ಇಲ್ಲದ ವೇಳೆ ಅವರ ಹೆಂಡತಿಯ ನಾಲ್ಕು ಬಂಗಾರದ ಬಳೆ ತೆಗೆದುಕೊಂಡು, ಪ್ರಾಣದ ಬೆದರಿಕೆ ಹಾಕಿದ್ದಾರೆ. ಕಿರುಕುಳ, ಮಾನಹಾನಿ, ಅಕ್ರಮ ಮನೆ ಪ್ರವೇಶ ಎಂದು ಸುಬ್ಬಾರೆಡ್ಡಿ ಅವರು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿ ಮಹಿಳೆ ಗೀತಾಳನ್ನು ಬಂಧಿಸಲು ಮನೆಗೆ ತೆರಳಿದ್ದಾಗ, 2.750 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
- ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
- ನಾಳೆ ರಾಜ್’ಘಾಟ್ನಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರ
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
More Stories
ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ